*ಮರದ ಕೊಂಬೆ ಬಿದ್ದು ಬಾಲಕಿ ಸಾವು*

ಪ್ರಗತಿವಾಹಿನಿ ಸುದ್ದಿ: ಮರದ ಕೊಂಬೆ ಬಿದ್ದು 15 ವರ್ಷದ ಬಾಲಕಿ ಸಾವನ್ನಪ್ಪಿರುವ ಘೋರ ಘಟನೆ ಬೆಂಗಳೂರಿನ ವಿ.ವಿ.ಪುರಂ ಬಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. 15 ವರ್ಷದ ತೇಜಸ್ವಿನಿ ಮೃತ ಬಾಲಕಿ. ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಮರದ ಕೊಂಬೆ ಬಿದ್ದು ಈ ದುರಂತ ಸಂಭವಿಸಿದೆ. ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಕಸದ ಲಾರಿಗೆ ಅಕ್ಕ-ತಂಗಿ ಬಲಿ*