*ನದಿಯಲ್ಲಿ ಈಜಲು ಹೋಗಿದ್ದ ಮೂವರು ಸ್ನೇಹಿತರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಸ್ನೇಹಿತರು ನೀರುಪಾಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರಲಹಳ್ಳಿ ಬಳಿ ನಡೆದಿದೆ. ಶರಣಪ್ಪ ಬಡಿಗೇರ (34) ಮಹೇಶ್ (36) ಗುರುನಾಥ್ (38) ನೀರುಪಾಲಾದವರು. ಗದಗ ಜಿಲ್ಲೆಯ ಶಿರಹಟ್ಟಿಯಿಂದ ಬಂದಿದ್ದ ಐವರು ಸ್ನೇಹಿತರು ಆಂಜನೇಯನ ದರ್ಶನ ಪಡೆದು ಬಳಿಕ ನದಿಗೆ ಈಜಲು ಹೋಗಿದ್ದರು. ಇದೇ ವೇಳೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶರಣಪ್ಪ ಕೂಡ ದೇವಸ್ಥಾನಕ್ಕೆ ಬಂದಿದ್ದ. ಈಜಲು ಬಾರದಿದ್ದರೂ ಸ್ನೇಹಿತ ಮಹೇಶ್ ಎಂಬಾತ ನದಿಗೆ ಇಳಿದಿದ್ದಾನೆ. ನೀರುಪಾಲಾಗುತ್ತಿದ್ದ ಆತನನ್ನು … Continue reading *ನದಿಯಲ್ಲಿ ಈಜಲು ಹೋಗಿದ್ದ ಮೂವರು ಸ್ನೇಹಿತರು ನೀರುಪಾಲು*