*ಹಬ್ಬದ ದಿನವೇ ಮತ್ತೊಂದು ದುರಂತ; ತುಂಗಾನದಿ ನೀರುಪಾಲಾದ ಇಬ್ಬರು ಯುವಕರು*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ತುಂಗಾ ನದಿಯಲ್ಲಿ ಮಿನು ಹಿಡಿಯಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುರುಬರಪಾಳ್ಯದಲ್ಲಿ ನಡೆದಿದೆ. ಫಯಾಜ್ ಅಹ್ಮದ್ (18) ಹಾಗೂ ಅಜಂ ಖಾನ್ (19) ನೀರುಪಾಲಾಗಿರುವ ಯುವಕರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ನೀರುಪಾಲಾಗಿರುವವರ ಶೋಧ ನಡೆಸಿದ್ದಾರೆ. ತುಂಗಾ ನದಿಯ ದಡದ ಮೇಲೆ ಯುವಕರ ಬಟ್ಟೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರೆದಿದೆ.Home add -Advt *ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ ಶವ … Continue reading *ಹಬ್ಬದ ದಿನವೇ ಮತ್ತೊಂದು ದುರಂತ; ತುಂಗಾನದಿ ನೀರುಪಾಲಾದ ಇಬ್ಬರು ಯುವಕರು*