*ಕೈಕಾಲು ತೊಳೆಯಲು ಕಾಲುವೆಗೆ ಇಳಿದಿದ್ದ ಇಬ್ಬರು ಮಹಿಳೆಯರ ಸಾವು*

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷದಂದೆ ಘೋರ ದುರಂತ ನಡೆದು ಹೋಗಿದೆ.‌ ಕೈಕಾಲು ತೊಳೆದುಕೊಳ್ಳಲು ಹೋಗಿ ಮಹಿಳೆಯರಿಬ್ಬರು ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆ ಹೊಸೂರು ಬಳಿ ಘಟನೆ ನಡೆದಿದ್ದು,  ಮೃತ ಮಹಿಳೆಯರನ್ನು ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಮತ್ತು ದೇವಮ್ಮ (30) ಎಂದೂ ಗುರುತಿಸಲಾಗಿದೆ.  ಗದ್ದೆಯಲ್ಲಿ ಭತ್ತ ಹಚ್ಚುವ ಕೂಲಿ ಕೆಲಸ ಮುಗಿಸಿಕೊಂಡು ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದರು. ಕೈಕಾಲು ತೊಳೆಯಲು … Continue reading *ಕೈಕಾಲು ತೊಳೆಯಲು ಕಾಲುವೆಗೆ ಇಳಿದಿದ್ದ ಇಬ್ಬರು ಮಹಿಳೆಯರ ಸಾವು*