*ಹಾವು ಕಚ್ಚಿ ಎರಡು ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಮನೆಯ ಅಂಗಳದ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಪುಟ್ಟ ಬಾಲಕನ ಬದುಕು ಹಾವು ಕಡಿತದಿಂದ ದುರಂತ ಅಂತ್ಯ ಕಂಡಿದೆ. ಕಣ್ಣೆದುರೇ ನಡೆದ ಈ ಘಟನೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಮೃತ ಬಾಲಕನನ್ನು ಯುನೈ (2) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಸಿಪೇಟೆ ಗ್ರಾಮದ ನಿವಾಸಿಗಳಾದ ಅನಿಲ್ ಮತ್ತು ರೂಪ ದಂಪತಿಯ ಪುತ್ರ ಯುನೈ ಮನೆಯ ಬಳಿ ಆಟವಾಡುತ್ತಿದ್ದಾಗ ಹಾವು … Continue reading *ಹಾವು ಕಚ್ಚಿ ಎರಡು ವರ್ಷದ ಮಗು ಸಾವು*