*ತಾಯಿ ಕೈಯಿಂದ ಆಕಸ್ಮಿಕವಾಗಿ ಜಾರಿದ ಮಗು; ಬಾವಿಗೆ ಬಿದ್ದು ಸಾವು*

ಪ್ರಗತಿವಾಹಿನಿ ಸುದ್ದಿ: ನೀರು ಸೇದುತ್ತಿದ್ದಾಗ ತಾಯಿ ಕೈಯಿಂದ ಆಕಸ್ಮಿಕವಾಗಿ ಜಾರಿದ ಮಗು ಬಾವಿಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಗರದ ಕಿನ್ನಿಮೂಲ್ಕಿ ಎಂಬಲ್ಲಿ ಈ ದುರಂತ ಸಂಭವಿಸಿದೆ. ಒಂದೂವರೆ ವರ್ಷದ ಕೀರ್ತನ ಮೃತ ಮಗು. ತಾಯಿ ನೀರು ಸೇದುತ್ತಿದ್ದ ವೇಳೆ ಕೈಯಿಂದ ಜಾರಿದ ಮಗು ಬಾವಿಗೆ ಬಿದ್ದಿದೆ. ತಕ್ಷಣ ಹಗ್ಗದ ಸಹಾಯದಿಂದ ತಾಯಿ ಬಾವಿಗಿಳಿದಿದ್ದಾರೆ. ಮಗುವನ್ನು ರಕ್ಷಿಸಲು ಹರಸಾಹಸಪಟ್ಟು ಮಗುವನ್ನು ಮೇಲಕೆತ್ತಿದ್ದಾರೆ. ಆದರೆ ಮಗು ಬದುಕಿಲ್ಲ. ಘಟನಾ ಸ್ಥಳಕ್ಕೆ ಉಡುಪಿ ಠಾಣೆ ಪೊಲೀಸರು … Continue reading *ತಾಯಿ ಕೈಯಿಂದ ಆಕಸ್ಮಿಕವಾಗಿ ಜಾರಿದ ಮಗು; ಬಾವಿಗೆ ಬಿದ್ದು ಸಾವು*