*ಉಕ್ಕಡಗಾತ್ರಿ ಜಾತ್ರೆಯಲ್ಲಿ ದುರಂತ: ನದಿಗೆ ಇಳಿದಿದ್ದ ಯುವಕ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬ ಜಾತ್ರೆಗೆಂದು ಬಂದವನು ನದಿಯಲ್ಲಿ ಸ್ನಾನ ಮಡಲು ಹೋಗಿ ನೀರುಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ. ಉಕ್ಕಡಗಾತ್ರಿ ಕರಿ ಬಸವೇಶ್ವರ ರಥೋತ್ಸವಕ್ಕೆಂದು ಬಂದಿದ್ದ ಯುವಕ ನಾಗರಾಜ್ (26) ಸ್ನಾನಕ್ಕೆ ತುಂಗಭದ್ರಾ ನದಿಗೆ ಇಳಿದಿದ್ದಾನೆ. ಈ ವೇಲೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಯುವಕ ಹಿರೆಕೇರೂರು ತಾಲೂಕಿನ ಹದರಿಹಳ್ಳಿ ನಿವಾಸಿ. ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. *ಹೃದಯಾಘಾತ: ಕಾರಿನಲ್ಲಿಯೇ ಸಾವನ್ನಪ್ಪಿದ ವ್ಯಕ್ತಿ* Home add -Advt