ಬೆಳಗಾವಿಯಲ್ಲಿ ಅಬ್ಬರಿಸಿದ ಅನಿರೀಕ್ಷಿತ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಗಳವಾರ ಮಧ್ಯರಾತ್ರಿಯ ನಂತರ ಬೆಳಗಾವಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಅಬ್ಬರಿಸಿದೆ. ಬೆಳಗಾವಿಯ ದಕ್ಷಿಣ ಭಾಗ ಸೇರಿದಂತೆ ಅನೇಕ ಕಡೆ ರಾತ್ರಿ 1 ಗಂಟೆ ಹೊತ್ತಿಗೆ ಏಕಾ ಏಕಿ ಮಳೆ ಆರಂಭವಾಯಿತು. ಅನಿರೀಕ್ಷಿತ ಮಳೆಯಿಂದಾಗಿ ರಾತ್ರಿ ಪಾಳಿ ಕೆಲಸಗಾರರು ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿದ್ದವರು ತೊಂದರೆ ಅನುಭವಿಸುವಂತಾಯಿತು. ಗುಡುಗು, ಸಿಡಿಲು ಯಾವುದೂ ಇಲ್ಲದೆ ಒಂದೇ ಬಾರಿಗೆ ಮಳೆ ಜೋರಾಗಿ ಸುರಿಯತೊಡಗಿತು. ಮಂಗಳವಾರ ಸಂಜೆ ಸ್ವಲ್ಪ ಮೋಡ ಕವಿದಿತ್ತಾದರೂ ರಾತ್ರಿ ಮಳೆಯ ನಿರೀಕ್ಷೆ ಇರಲಿಲ್ಲ. ಸುಮಾರು ಅರ್ಧ … Continue reading ಬೆಳಗಾವಿಯಲ್ಲಿ ಅಬ್ಬರಿಸಿದ ಅನಿರೀಕ್ಷಿತ ಮಳೆ