*ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿಯೇ ಕುಸಿದು ಬಿದ್ದ ಅಪರಿಚಿತ ವ್ಯಕ್ತಿ: ಚಿಕಿತ್ಸೆ ಫಲಿಸದೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪರಿಚಿತ ವ್ಯಕ್ತಿಯೊಬ್ಬರು ಆರೋಗ್ಯದಲ್ಲಿ ಏರುಪೇರಾಗಿ ಬೆಳಗಾವಿ ನಗರದ ರೈಲು ನಿಲ್ದಾಣದಲ್ಲಿಯೇ ಕುಸಿದು ಬಿದಿದ್ದು, ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ವಯಸ್ಸು ಅಂದಾಜು 65-70 ವರ್ಷ. ಬಿಳಿ ಮೈಬಣ್ಣ, ತೆಳ್ಳಗೆ, ಕೋಲು ಮುಖ, ಚೂಪಾದ ಮೂಗೂ, ಬೋಳಾದ ತಲೆ, ಬಿಳಿ ಸಣ್ಣಗೆ ದಾಡಿ ಬಿಟ್ಟಿದ್ದರು. ಕಡು ನೀಲಿ ಬಣ್ಣದ ಫುಲ್ ಶರ್ಟ್ ಧರಿಸಿದ್ದಾರೆ. … Continue reading *ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿಯೇ ಕುಸಿದು ಬಿದ್ದ ಅಪರಿಚಿತ ವ್ಯಕ್ತಿ: ಚಿಕಿತ್ಸೆ ಫಲಿಸದೇ ಸಾವು*