*ಡಿಜೆ ಸೌಂಡ್ ಗೆ ಹೃದಯಾಘಾತ: ಶಾಲೆಯಲ್ಲಿ ಕುಸಿದು ಬಿದ್ದ ಬಾಲಕಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಡಿಜೆ ಸೌಂಡ್ ನಿಂದ 2ನೇ ತರಗತಿ ವಿದ್ಯಾರ್ಥಿಯೊಬ್ಬಳು ಶಾಲೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಾಲೆಯ ಮುಂಭಾಗ ಡಿಜೆ ಮೆರವಣಿಗೆ ಹಾದುಹೋದ ಕೆಲವೇ ಸಮಯದಲ್ಲಿ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ತರಗತಿಯಲ್ಲಿದ್ದ ಸಿಸಿಟಿವಿಯಲ್ಲಿ ಬಾಲಕಿ ಕುಸಿದುಬಿದ್ದು ಸಾವನ್ನಪ್ಪಿದ ವಿಡಿಯೋ ಸೆರೆಯಾಗಿದೆ. ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮುಂಭಾಗದಲ್ಲಿ ಮೂರ್ತಿ ವಿಸರ್ಜನಾ ಮೆರವಣಿಗೆಯೊಂದು ಸಾಗುತ್ತಿತ್ತು. ಈ ವೇಳೆ ಕಿವಿಗಡಚಿಕ್ಕುವ ಡಿಜೆ ಹಾಕಲಾಗಿತ್ತು. ಆ ಶಬ್ಧ ಶಾಲೆಯ ಒಳಗೆಲ್ಲ ಪ್ರತಿಧ್ವನಿಸಿತ್ತು. ಈ ವೇಳೆ ಕೆಲವು … Continue reading *ಡಿಜೆ ಸೌಂಡ್ ಗೆ ಹೃದಯಾಘಾತ: ಶಾಲೆಯಲ್ಲಿ ಕುಸಿದು ಬಿದ್ದ ಬಾಲಕಿ ಸ್ಥಳದಲ್ಲೇ ಸಾವು*