*ವಸತಿ ಶಾಲೆಯಲ್ಲಿ ಮತ್ತೊಂದು ಎಡವಟ್ಟು; ಕುವೆಂಪು ಘೋಷವಾಕ್ಯವೇ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಘೋಷವಾಕ್ಯವನ್ನೇ ತಿದ್ದಿ ಬದಲಾವಣೆ ಮಾಡಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಘಾಳಪೂಜೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೇಲ್ ನ ಪ್ರವೇಶ ದ್ವಾರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯವನ್ನು ಬದಲಾವಣೆ ಮಾಡಿ ಬರೆಯಲಾಗಿದೆ. ’ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷವಾಕ್ಯವನ್ನು ’ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾವಣೆ ಮಾಡಲಾಗಿದೆ. ವಸತಿ ಶಾಲೆಯ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. … Continue reading *ವಸತಿ ಶಾಲೆಯಲ್ಲಿ ಮತ್ತೊಂದು ಎಡವಟ್ಟು; ಕುವೆಂಪು ಘೋಷವಾಕ್ಯವೇ ಬದಲಾವಣೆ*