*ಯುವಕನ ಮೇಲೆ ಹರಿದ ನೀರಿನ ಟ್ಯಾಂಕರ್: ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಯುವಕನ ಮೇಲೆಯೇ ನೀರಿನ ಟ್ಯಾಂಕರ್ ಹರಿದು ಹೋದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೊತ್ತನೂರು ದಿಣ್ಣೆ ಬಳಿ ನಡೆದಿದೆ. 21 ವರ್ಷದ ಕಿರಣ್ ಕುಮಾರ್ ಮೃತ ಯುವಕ. ಕಿರಣ್ ಕುಮಾರ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಟರ್ ಟ್ಯಾಂಕರ್ ಯುವಕನ ಮೇಲೆಯೇ ಹರಿದಿದೆ. ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಮೃತ ಕಿರಣ್ ಕುಮಾರ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನಾ ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Home add -Advt … Continue reading *ಯುವಕನ ಮೇಲೆ ಹರಿದ ನೀರಿನ ಟ್ಯಾಂಕರ್: ಸ್ಥಳದಲ್ಲೇ ದುರ್ಮರಣ*