*ಹೆಣ್ಣುಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ಹೆಣ್ಣುಮಗು ಹೆತ್ತಿದ್ದಕ್ಕೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಗಂಗಾಖೇಡ್ ನಾಕಾದಲ್ಲಿ ನಡೆದಿದೆ. ಕುಂಡ್ಕ್ ಉತ್ತಮ್ ಕಾಳೆ ಪತ್ನಿಯನ್ನೇ ಕೊಂದ ಪತಿ. ಮೈನಾ ಪತಿಯಿಂದಲೇ ಕೊಲೆಯಾಗಿರುವ ಬಾಣಂತಿ. ಮೂರನೆಯದೂ ಹೆಣ್ಣುಮಗು ಎಂದು ಪತ್ನಿಯ ಮೇಲೆ ಪೆಟ್ರೋಲ್ ಸುರಿದ ಕುಂಡ್ಲಿಕ್ ಉತ್ತಮ್, ಬೆಂಕಿ ಹಚ್ಚಿದ್ದಾನೆ. ಮೈನಾ ಕೂಗಾಡುತ್ತಾ ಮನೆಯಿಂದ ಹೊರಗೋಡಿಬಂದಿದ್ದಾಳೆ. ನೆರೆಹೊರೆಯವರು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾರೆ. ಮೂರನೆಯದೂ ಹೆಣ್ಣು … Continue reading *ಹೆಣ್ಣುಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದ ಪತಿ*