GIT add 2024-1
Laxmi Tai add
Beereshwara 33

5ನೇ ತರಗತಿಯಿಂದ ಮಕ್ಕಳಿಗೆ ಕಾಂಡೋಂ ಭಾಗ್ಯ

ಆಡಳಿತ ಮಂಡಲಿ ಸಮರ್ಥನೆ. ಪಾಲಕರ ಆಕ್ರೋಶ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಚಿಕಾಗೊ: ಅಮೇರಿಕಾದ ಚಿಕಾಗೋ ನಗರದ ಶಾಲೆಗಳಲ್ಲಿ ಮಕ್ಕಳಿಗೆ 5ನೇ ತರಗತಿಯಿಂದಲೇ ಉಚಿತ ಕಾಂಡೋಂ ವಿತರಿಸುವ ಯೋಜನೆಯೊಂದನ್ನು ಅಲ್ಲಿನ ಆರೋಗ್ಯ ಇಲಾಖೆ ಜಾರಿಗೊಳಿಸಿದೆ.

ಚಿಕಾಗೊ ಪಬ್ಲಿಕ್‌ ಸ್ಕೂಲ್ಸ್‌ ಬೋರ್ಡ್‌ ತನ್ನ ಪ್ರೌಢ ಶಾಲೆಗಳಲ್ಲಿ’ಕಾಂಡೋಮ್‌’ ಭಾಗ್ಯ ಯೋಜನೆ ಜಾರಿಗೊಳಿಸಿದೆ.  ಪ್ರತಿ ಪ್ರೌಢ ಶಾಲೆಗೆ ತಿಂಗಳಿಗೆ 250, ಹೈಸ್ಕೂಲ್‌ಗೆ 1000 ಕಾಂಡೋಮ್‌ಗಳನ್ನು ನೇರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5ನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಂಡೋಂ ಒದಗಿಸುತ್ತಿದ್ದು, ”ಆರಂಭದಲ್ಲೇ ಉತ್ತಮ ಲೈಂಗಿಕ ಶಿಕ್ಷಣ ದೊರೆಯಬೇಕು. ಅದರಿಂದ ಅಕಾಲಿಕ ಸಂತಾನ ಮತ್ತು ಲೈಂಗಿಕ ರೋಗ ಹರಡುವುದನ್ನು ತಡೆಗಟ್ಟಬಹುದು” ಎನ್ನುವುದು ಆಡಳಿತ ಮಂಡಳಿಯ ಸಮರ್ಥನೆ.

ನಗರದ 600ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಕಾಂಡೋಮ್‌ ವಿತರಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆಯೇ ಕಾಂಡೋಂ ವೆಚ್ಚ ಭರಿಸುತ್ತಿದೆ.

Emergency Service

ಕೆಲವರು ಯೋಜನೆಯನ್ನು ಟೀಕಿಸುತ್ತಿದ್ದಾರೆ. ಆದರೆ ಮಕ್ಕಳು ಏನೂ ತಿಳಿಯದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಅನಾಹುತ ಆಗುತ್ತದೆ. ಹದಿಹರೆಯದಲ್ಲೇ ಗರ್ಭ ಧರಿಸುವ ಅಪಾಯ ಇದೆ. ಇದರಿಂದ ಸಮಾಜದಲ್ಲಿ ಅಕ್ರಮ ಸಂತಾನ ಹೆಚ್ಚಿ , ಅನಾಥ ಮಕ್ಕಳ ಹೊರೆ ಬೀಳುತ್ತದೆ. ವಿದ್ಯಾರ್ಥಿಗಳಲ್ಲಿ  ಅಪಾಯಕಾರಿ ಲೈಂಗಿಕ ರೋಗಗಳೂ ಕಾಣಿಸಿ ಸಮಸ್ಯೆ ಸೃಷ್ಟಿಯಾಗುತ್ತದೆ. ಇದಕ್ಕೆಲ್ಲ ಕಾಂಡೋಂ ಉತ್ತಮ ಪರಿಹಾರ,” ಎನ್ನುತ್ತಾರೆ ಶಾಲಾ ಆಡಳಿತ ಮಂಡಳಿ ವೈದ್ಯ ಡಾ.ಕೆನೆತ್‌ ಫಾಕ್ಸ್‌.

”ಮಕ್ಕಳಿಗೆ ನಾವು ಬಲವಂತ ಮಾಡುವುದಿಲ್ಲ. ಆದರೆ ಅವರಿಗೆ ಅಗತ್ಯ ಇರುವಾಗ ಕಾಂಡೋಂ ಲಭ್ಯವಾಗುವಂತೆ ಮಾಡುವುದು ನಮ್ಮ ಜವಾಬ್ದಾರಿ,” ಎನ್ನುವುದು ಅವರ ವಾದ.

”ಇದು ಮಕ್ಕಳನ್ನು ದಾರಿ ತಪ್ಪಿಸುವ ಕ್ರಮ. ಅವರ ಕೈಗೆ ಕಾಂಡೋಮ್‌ ನೀಡಿದರೆ ಆಟ ಆಡಲು ಬಳಸುತ್ತವೆ. ಅದರಿಂದ ತೆರಿಗೆ ಹಣ ದಂಡ. ಇನ್ನೂ ಕೆಲವು ಮಕ್ಕಳು ಕಾಂಡೋಮ್‌ ಇವೆ ಎನ್ನುವ ಕಾರಣಕ್ಕೆ ಅಕ್ರಮ ಲೈಂಗಿಕ ಕ್ರಿಯೆಗೆ ಯತ್ನಿಸಬಹುದು,” ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ”10 ವರ್ಷದ ಮಕ್ಕಳಿಗೆ ಅಂತಹ ಎಳೆ ಪ್ರಾಯದಲ್ಲಿ ಕಾಂಡೋಂ ಕೊಡುವುದು ಸರಿಯಲ್ಲ. ಅವರಿಗೆ ಲೈಂಗಿಕ ಶಿಕ್ಷಣ ನೀಡುವುದಾದರೆ ನೀಡಿ. ಅದನ್ನು ಬಿಟ್ಟು ಕಾಂಡೋಂ ಕೊಡುವುದೆಂದರೆ ಮೂರ್ಖತನ” ಎಂದು  ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Bottom Add3
Bottom Ad 2