*ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿರುವ ನಡುವೆಯೇ ಇದೀಗ ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ ಮೂವರು ಸಾವನ್ನಪ್ಪಿರುವ ದುರಂತ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪಟನಟಗಿ ಗ್ರಾಮದಲ್ಲಿ ಮೂವರು ಮೃತಪಟ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ದೇವಕಮ್ಮ ಹೊಟ್ಟಿ (45), ವೆಂಕಮ್ಮ (60) ಹಾಗೂ ರಾಮಣ್ಣ ಪೂಜಾರಿ (50)ಮೃತ ದುರ್ದೈವಿಗಳು. ಹತ್ತು ದಿನಗಳ ಹಿಂದೆ ವಾಂತಿ-ಬೇಧಿಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕಲುಷಿತ ನೀರು … Continue reading *ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ ಮೂವರು ಸಾವು*