*ರಂಗಧಾಮದಲ್ಲಿ ಯಶಸ್ವಿಯಾಗಿ ನಡೆದ ಯಕ್ಷಗೆಜ್ಜೆಯ ವಾರ್ಷಿಕೋತ್ಸವ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ವರುಷದಿಂದ ವರುಷಕ್ಕೆ ಹರುಷವನ್ನು ಹೆಚ್ಚಿಸುತ್ತಲಿರುವ ಯಕ್ಷಗೆಜ್ಜೆಯ ವಾರ್ಷಿಕೋತ್ಸವವು ಸಂಭ್ರಮದಲ್ಲಿ ನಡೆಯಿತು. ನಗರದ ರಂಗಧಾಮದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅತ್ಯಂತ ಸಂಭ್ರಮದಿಂದ ಜರುಗಿತು. ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಮಕ್ಕಳಿಂದ ಪೂರ್ವ ರಂಗ, ಮಕ್ಕಳ ಯಕ್ಷಗಾನ ಹಾಗೂ ಮಹಿಳಾ ಯಕ್ಷಗಾನ ಇವೆಲ್ಲ ವಾರ್ಷಿಕೋತ್ಸವದ ಒಂದು ಭಾಗವಾಗಿ ಗಂಡುಕಲೆ ಎನಿಸಿದ ಯಕ್ಷಗಾನದ ಹಿರಿಮೆ ಗರಿಮೆಯನ್ನು ಮತ್ತಷ್ಟು ಉನ್ನತಿಗೇರಿಸಿತು. ಯಕ್ಷಗೆಜ್ಜೆಯ ಮಾರ್ಗದರ್ಶಕ ಗಜಾನನ ಭಟ್ ತುಳಗೇರಿ ಹಾಗೂ ಶಂಕರ ಭಾಗವತ … Continue reading *ರಂಗಧಾಮದಲ್ಲಿ ಯಶಸ್ವಿಯಾಗಿ ನಡೆದ ಯಕ್ಷಗೆಜ್ಜೆಯ ವಾರ್ಷಿಕೋತ್ಸವ*