*ವಿದ್ಯುತ್ ಶಾಕ್ ತಗುಲಿ ಕೃಷ್ಣಾ ನದಿಗೆ ಬಿದ್ದ ಯುವಕ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೋಟಾರ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದಿದೆ. ಬಸವರಾಜ ಐನಾಪುರ ಎಂಬಾತ ನೀರು ಪಾಲಾದ ಯುವಕ. ಖೇಮಲಾಪುರ ಗ್ರಾಮದಲ್ಲಿ ಹರಿಯುವ ಕೃಷ್ಣಾ ನದಿ ಪಕ್ಕದಲ್ಲಿ ಇಂದು ಬೆಳಗ್ಗೆ ಮೋಟಾರ್ ಪಂಪ್ ಸ್ಟಾರ್ಟ್ ಮಾಡಲು ತೆರಳಿದ್ದ. ಈ ಸಂದರ್ಭದಲ್ಲಿ ಬಸವರಾಜಗೆ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ಶಾಕ್ ನಿಂದ  ಕೃಷ್ಣಾ ನದಿಗೆ ಬಿದ್ದ ಯುವಕ ನಾಪತ್ತೆ ಆಗಿದ್ದಾನೆ.‌ ಯುವಕನ ಪತ್ತೆಗಾಗಿ ಅಗ್ನಿಶಾಮಕ … Continue reading *ವಿದ್ಯುತ್ ಶಾಕ್ ತಗುಲಿ ಕೃಷ್ಣಾ ನದಿಗೆ ಬಿದ್ದ ಯುವಕ ನಾಪತ್ತೆ*