*ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯೂಟ್ಯೂಬರ್*: *ರೋಪ್ ಬಳಸಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಸಾಹಸಮಯ ಟ್ರೆಕ್ಕಿಂಗ್‌ಗೆಂದು ಬೆಟ್ಟ ಹತ್ತಿದ್ದ ಯೂಟ್ಯೂಬರ್ ಒಬ್ಬರು ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡು ಕೆಳಗಿಳಿಯಲಾಗದೆ ಆತಂಕಗೊಂಡಿದ್ದಾರೆ. ಕೊನೆಗೆ ಸಮಯಪ್ರಜ್ಞೆ ಮೆರೆದು ಪೊಲೀಸರ ನೆರವು ಕೋರಿದ್ದು, ಸದ್ಯ  ಅಗ್ನಿಶಾಮಕ ಸಿಬ್ಬಂದಿ ರೋಪ್ ಬಳಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ರಾಮನಗರ ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಯೂಟ್ಯೂಬರ್‌ ಟ್ರೆಕ್ಕಿಂಗ್‌ಗೆ ಹೋಗಿದ್ದಾರೆ. ಒಡಿಶಾ ಮೂಲದ ಬಿಸ್ವಾಜಿತ್ ನಾಥ್ ಎಂಬ ಯೂಟ್ಯೂಬರ್ ವಾರಾಂತ್ಯದ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಒಬ್ಬರೇ ಬೆಟ್ಟಕ್ಕೆ ಬಂದಿದ್ದರು. ಟ್ರೆಕ್ಕಿಂಗ್ ಮಾಡುತ್ತಾ ಸುಮಾರು ಒಂದು … Continue reading *ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯೂಟ್ಯೂಬರ್*: *ರೋಪ್ ಬಳಸಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ*