Latest

ಅಂಗಡಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಬಹುಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಅಂಗಡಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯ ಭರತೇಶ ಪಾಲಿಟೆಕ್ನಿಕ್‌ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪ್ರೊಜೆಕ್ಟ್ ಪ್ರದರ್ಶನ ದಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಋತುರಾಜ ಪಾಟೀಲ, ಪ್ರಸಾದ ತುಡವೇಕರ, ಆದಿತ್ಯ ಕೇದಾರ, ಶುಭಂ ಲೋಹಾರ ಹಾಗೂ ವಿನಾಯಕ ಕಾಕಡೆ ಇವರುಗಳ ತಂಡ ರಾಕರ್ ಬೋಗಿ ಪೊಜೆಕ್ಟಗಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್, ಸಂಸದ ಸುರೇಶ ಅಂಗಡಿ, ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಡಿಪ್ಲೋಮಾ ಪ್ರಾಚಾರ್ಯ ಪ್ರೊ. ಸದಾನಂದ ದೊಡಮನಿ ಅಭಿನಂದಿಸಿದ್ದಾರೆ.

Home add -Advt

Related Articles

Back to top button