Latest

ಅಂಬೋಳಿಯಲ್ಲಿ ರೈತ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ

ತಾಲ್ಲೂಕಿನ ಅಂಬೋಳಿ ಗ್ರಾಮದ ರೈತ ದಶರಥ ಪಾಟೀಲ (60) ಶನಿವಾರ ವಿಷ ಸೇವಿಸಿ
ಆತ್ಮಹತ್ಯೆಗೆ ಶರಣಾಗಿದ್ದಾರೆ.

2 ಎಕರೆಯಷ್ಟು ಕೃಷಿ ಭೂಮಿಯನ್ನು ಹೊಂದಿದ್ದ ದಶರಥ ಅವರು ತಮ್ಮ ಜಮೀನಿನಲ್ಲಿ ಸಾಗುವಳಿ ಮಾಡಲು ವಿವಿಧ ವಾಣಿಜ್ಯ ಸಂಸ್ಥೆಗಳಿಂದ 3
ಲಕ್ಷದಷ್ಟು ಸಾಲವನ್ನು ಪಡೆದಿದ್ದರು. ಸಾಲಮಾಡಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈಗೆ ಬಾರದ ಕಾರಣ ಮನನೊಂದ ಅವರು ಈ ರೀತಿ ಆತ್ಮಹತ್ಯಗೆ ಶರಣಾಗಿದ್ದಾರೆ ಎಂದು ಮೃತರ ಕುಟುಂಬದ
ಮೂಲಗಳು ತಿಳಿಸಿವೆ. ಮೃತರಿಗೆ ಓರ್ವ ಸಹೋದರ ಮತ್ತು ನಾಲ್ವರು ಪುತ್ರರು ಇದ್ದಾರೆ. ಈ
ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button