Latest

ಅಕ್ರಮ ಮರಳಿಗೆ ಪೊಲೀಸರ ತಡೆ

     

        ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಣಿಕೆ ಮತ್ತು ಫಿಲ್ಟರ್ ಮರಳು ಉತ್ಪಾದನೆಗೆ ಪೊಲೀಸರು ತಡೆಯೊಡ್ಡಿದ್ದಾರೆ.

Home add -Advt

ಪ್ರಗತಿವಾಹಿನಿಯಲ್ಲಿ ಪ್ರಕಟವಾದ ಸುದ್ದಿ ಅಧಿಕಾರಿಗಳಲ್ಲಿ ತಲ್ಲಣ ಸೃಷ್ಟಿಸಿದ್ದು, ಎಂ ಸ್ಯಾಂಡ್ ಮಾಲಿಕರನ್ನು ಸಂಪರ್ಕಿಸಿ, ತಕ್ಷಣದಿಂದ ಅಕ್ರಮ ಮರಳಿಗೆ ತಡೆಯೊಡ್ಡುವುದಾಗಿಯೂ, ಯಾವುದೇ ಮಾಹಿತಿ ಇದ್ದಲ್ಲಿ ಮಾಧ್ಯಮಗಳಗೆ ಹೋಗುವ ಬದಲು ತಮಗೇ ಮಾಹಿತಿ ನೋಡುವಂತೆಯೂ ಕೋರಿದ್ದಾರೆ.

ಖಾನಾಪುರ ಮತ್ತು ರಾಜಗೋಳಿಯಿಂದ ಬೆಳಗಾವಿ ನಗರಕ್ಕೆ ರಾತ್ರಿಯಿಡೀ ಅಕ್ರಮವಾಗಿ ಫಿಲ್ಟರ್ ಮರಳು ಸಾಗಾಣಿಕೆಯಾಗುತ್ತಿರುವ ಕುರಿತು, ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ತಡೆಯದಿರುವ ಕುರಿತು ಪ್ರಗತಿವಾಹಿನಿ ವಿವರ ವರದಿ ಪ್ರಕಟಿಸಿತ್ತು. ಈ ವರದಿ ಹಿರಿಯ ಅಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿ ಕಚೇರಿಗೂ ತಲುಪಿತ್ತು. ಅಲ್ಲಿಂದ ಸ್ಥಳೀಯ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಬಂದಿದ್ದು, ಅಕ್ರಮ ಮರಳು ಸಾಗಣೆ ತಡೆಯದಿದ್ದಲ್ಲಿ ತಲೆದಂಡ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಷಯವನ್ನು ಮುಖ್ಯಮಂತ್ರಿ ಕಚೇರಿ ಗಂಭೀರವಾಗಿ ತೆಗೆದುಕೊಂಡಿದೆ. ಫಿಲ್ಟರ್ ಮರಳಿನ ಬಳಕೆಯಿಂದ ಕಟ್ಟಡಗಳು ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆ ಇರುವ ಬಗ್ಗೆ ಮತ್ತು ಇದರಿಂದ ಸರಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂ. ರಾಯಲ್ಟಿ ನಷ್ಟವಾಗುತ್ತಿರುವ ಕುರಿತು ಪ್ರಗತಿವಾಹಿನಿ ವಿವರವಾಗಿ ಪ್ರಕಟಿಸಿತ್ತು. 

ಅಧಿವೇಶನ ಮುಗಿಯುವವರೆಗಷ್ಟೆ ಪೊಲೀಸರ ಕ್ರಮವೋ ನಂತರವೂ ಮುಂದುವರಿಯಲಿದೆಯೋ ಕಾದುನೋಡಬೇಕಿದೆ. 

Related Articles

Back to top button