ಮಕ್ಕಳಲ್ಲಿ ಧೈರ್ಯ ತುಂಬಿ, ಪ್ರೀತಿಯಿಂದ ನೇವರಿಸಿ -ಪ್ರಗತಿವಾಹಿನಿ ಕಳಕಳಿ
ಪಿಯುಸಿ, ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಮುಂದೆ ಬೇಕಾದಷ್ಟು ಅವಕಾಶಗಳು ಬರುತ್ತವೆ.
ಜೀವನದಲ್ಲಿ ಪಾಸಾಗುವುದು ಮುಖ್ಯವೇ ವಿನಃ ಪಿಯುಸಿ, ಎಸ್ಎಸ್ಎಲ್ ಸಿಯಲ್ಲಿ ಅಲ್ಲ. ಗಟ್ಟಿಯಾಗಿ ನಿಂತು ಜೀವನ ಎದುರಿಸಿ. ಪಾಲಕರೂ ಮಕ್ಕಳನ್ನು ನಿಂದಿಸಬೇಡಿ. ಪ್ರೀತಿಯಿಂದ ಧೈರ್ಯ ತುಂಬಿ.
ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿದೆ. ಬದುಕಿಗೆ ಮಾರ್ಗ ಕಂಡುಕೊಳ್ಳಲು ಸಾಕಷ್ಟು ಅವಕಾಶವಿದೆ. ಅನುತ್ತೀರ್ಣರಾದ ಎಷ್ಟೋ ಜನ ಜೀವನದಲ್ಲಿ ಸಾಕಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಅಂತವರಲ್ಲಿ ನೀವೂ ಒಬ್ಬರಾಗಿ.
ಮಕ್ಕಳಿಗೆ ಕೌನ್ಸೆಲಿಂಗ್ (ಆಪ್ತಸಮಾಲೋಚನೆ) ಅಗತ್ಯವಾದರೆ ಪ್ರಗತಿವಾಹಿನಿ ಉಚಿತವಾಗಿ ವ್ಯವಸ್ಥೆ ಮಾಡಿಕೊಡುತ್ತದೆ.
ಸಂಪರ್ಕಿಸಿ -8197712235
ಪಿಯುಸಿಯಲ್ಲಿ ಅನುತ್ತಿರ್ಣ, ನೇಣಿಗೆ ಶರಣಾದ ವಿದ್ಯಾರ್ಥಿನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ