Latest

ಅರಭಾವಿ ಮತಕ್ಷೇತ್ರ: ಸುಣಧೋಳಿ 3 ಮತಗಟ್ಟೆಗಳ ಸ್ಥಳಾಂತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಭಾರತ ಚುನಾವಣಾ ಆಯೋಗ ನವದೆಹಲಿ ಅವರ ಪತ್ರದ ಮೇರೆಗೆ ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ  ಅರಭಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಣಧೋಳಿ ಗ್ರಾಮದಲ್ಲಿಯ ಮತಗಟ್ಟೆಗಳ ಕಟ್ಟಡಗಳನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳಾಂತರಗೊಂಡ ಕಟ್ಟಡಗಳ ವಿವರಣೆ:
ಮತಗಟ್ಟೆಗಳ ಸಂಖ್ಯೆ- ೧೬೮,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗದ ಪೂರ್ವ ಕೋಣೆ (ಹೊಸ ಆರ್‌ಸಿಸಿ ಕಟ್ಟಡ) ಸುಣದೋಳಿಯಲ್ಲಿದ್ದ ಕಟ್ಟಡವನ್ನು ಶ್ರೀ ಜಡಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ನೆಲ ಮಹಡಿ ಕೋಣೆ ನಂ ೧ ಸುಣಧೋಳಿ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.

ಮತಗಟ್ಟೆಗಳ ಸಂಖ್ಯೆ- ೧೬೯,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗದ ಪಶ್ಚಿಮ ಕೋಣೆ (ಹೊಸ ಆರ್‌ಸಿಸಿ ಕಟ್ಟಡ) ಸುಣದೋಳಿಯಲ್ಲಿದ್ದ ಕಟ್ಟಡವನ್ನು ಶ್ರೀ ಜಡಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ನೆಲ ಮಹಡಿ ಕೋಣೆ ನಂ ೩ ಸುಣಧೋಳಿ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.

Home add -Advt

ಮತಗಟ್ಟೆಗಳ ಸಂಖ್ಯೆ- ೧೭೦,
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಪಶ್ಚಿಮ ಭಾಗ ಸುಣದೋಳಿ ಕ್ರಾಸ್ ಸುಣದೋಳಿಯಲ್ಲಿದ್ದ ಕಟ್ಟಡವನ್ನು ಶ್ರೀ ಜಡಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ನೆಲ ಮಹಡಿ ಕೋಣೆ ನಂ ೫ ಸುಣಧೋಳಿ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.

ಜಾತ್ರೆ ಇರುವ ಹಿನ್ನೆಲೆಯಲ್ಲಿ ಮತಗಟ್ಟೆಗಳನ್ನು ಸ್ಥಳಾಂತರಿಸುವಂತೆ, ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದರು.

ಸುಣದೋಳಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ  

(ಪ್ರಗತಿವಾಹಿನಿ ಸುದ್ದಿಗಳನ್ನು ಇತರ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button