ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಶಾಸಕ ಆನಂದ ಸಿಂಗ್ ಅವರು ನನ್ನನ್ನು ಅವಾಚ್ಯವಾಗಿ ಬೈಯ್ದು ನನ್ನ ಮೇಲೆ ಕೈ ಮಾಡದಿದ್ದರೆ ಅವರ ಮೇಲೆ ಹಲ್ಲೆ ಮಾಡುವ ಉದ್ದೇಶ ನನಗಿರಲಿಲ್ಲ, ಅವರು ನನ್ನ ಮೇಲೆ ಕೂಡ ಹಲ್ಲೆ ನಡೆಸಿದ್ದು, ನನಗೆ ಪಕ್ಷದ ಮುಖಂಡರೇ ಪ್ರಾಥಮಿರ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದ್ದಾರೆ. ಕಂಪ್ಲಿ ಕಾಂಗ್ರೆಸ್ ಹೆಸರುನ ಫೇಸ್ ಬುಕ್ ಪೇಜ್ ನಲ್ಲಿ ಗಣೇಶ ಆ ದಿನ ನಡೆದ ಘಟನೆಯ ಪೂರ್ಣ ವಿವರ ಬರೆದಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ…
Kampli Congress
ಅಂದು ಏನು ಘಟನೆಗಳು ನಡೆದಿದ್ದವು ಅವು ಎಲ್ಲ ಸುಳ್ಳು. ಈಗಲ್ ಟನ್ ರೆಸಾರ್ಟ್ ನಲ್ಲಿ ನಾನು ಹಾಗೂ ಆನಂದ್ ಸಿಂಗ್ ಪಾರ್ಟಿ ಮಾಡಿದ್ದು ನಿಜನೇ, ಪಾರ್ಟಿ ಮಾಡಿದ ನಂತರ ಆನಂದ್ ಸಿಂಗ್ ಅವರೇ ರೂಮ್ ಗೆ ಕರೆದುಕೊಂಡು ಹೋಗಿ ರಾತ್ರಿ 11:00 ಘಂಟೆ ಇಂದ 02:30 ಘಂಟೆ ವರಿಗೆ ಕುಳಿಸಿ ಕೊಂಡು ಮಾತನಾಡಿದರು. ಕುಂತ ನಂತರ ನೀನು ಸಾಮಾನ್ಯ ವ್ಯಕ್ತಿ ನೀನು MLA ಆಗಿದ್ದು ನಾನು ಸಹಿಸುವುದಿಲ್ಲ. ನನ್ನ opposite ಕುಳಿತು ಕೊಳ್ಳುವ ಶಕ್ತಿ ನಿನಗೆ ಬಂತ ಮಗನೇ, ಕೆಳಗೆ ಕುಳಿತು ಕೊಳ್ಳುವ ಮಗನೇ ಅಂತ ನನಗೆ ನಿಂದನೆ ಮಾಡುತ್ತಲೇ ಮಾತಾಡಿದ್ದಾರೆ, ಹೋದ election ದಲ್ಲಿ ನೀನು independent candidate ಆಗಿ ನಿಲ್ಲಲು ಹಾಗೂ ಸೋಲಲು ನಾನೇ ಕಾರಣ. 81 ರೆಹಮಾನ್ ಸಾಬ್ ನಿಗೆ ನಿನ್ನ ಅಪ್ಪ ನ ಹತ್ತಿರ ಕಳುಹಿಸ independent ಆಗಿ ನಿಲ್ಲಲು ನಾನೇ ಕಾರಣ. ಈ ರೀತಿ ನೀನು ಆರ್ಥಿಕ ವಾಗಿ ಕುಗ್ಗಿ ಭಿಕ್ಷೆ ಬೇಡುವ ಹಾಗೆ ಮಾಡಿದೆ. TUKARAMA ಗೆ MINISTER ಮಾಡಲು ದೆಹಲಿಗೆ ಹೋಗುತ್ತೀಯಾ ಸೂಳೆ ಮಗನೇ ಎಂದು ಹೇಳಿದರು ಎಂ. ಪಿ ರವೀಂದ್ರ ರವರ ಜಾಗ 2 ಕೋಟಿ ಗೆ ತೆಗದು ಕೊಂಡು ಹಗರಿಬೊಮ್ಮಮನಹಳ್ಳಿ ಅಲ್ಲಿ OFFICE ಮಾಡಿ ಭೀಮಾ ಗೆ ಸೋಲಿಸಲು ಪಣ ತೊಟ್ಟಿದೆ ಆದರೆ ಅದು ಆಗಲಿಲ್ಲ. ಈಗ ಕಂಪ್ಲಿ ಯಲ್ಲಿ OFFICE ತೆಗದು ನಿನ್ನನ್ನು ಮುಗಿಸುತ್ತೇನೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ಇದ್ದರೂ ನನ್ನ ಒಂದು ಕುದಲು ಕೀಳಲು ಅವರಿಂದ ಆಗಲಿಲ್ಲ. ಆದರು ನಾನು ಗೆದ್ದು ಬಂದೆ ಕೀಳು ಜಾತಿ ನೀನು ಅದಕ್ಕೆ ಸೇರಿದವನು.
ಕೆಳಗೆ ಕೂತಿದ್ದ ನನ್ನ ಎದೆ ಗೆ ಜೋರಾಗಿ ಕಾಲಿನಿಂದ ಒಡೆದರು ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎದೆಗೆ ನೋವು ಆಗಿದ್ದರಿಂದ ನಾನು ನಿಧಾನವಾಗಿ ರೂಮ್ ಗೆ ಹೋದೆ. ಆನಂದ್ ಸಿಂಗ್ ಮತ್ತೆ ರೂಮಿನ ವರಿಗೆ ಬಂದು pot ಎತ್ತಿ ಹೊಡೆದು ನನ್ನ ರೂಮಿನ door ತಟ್ಟಿ ಬಾಲೆ ಸೂಳೆ ಮಗನೇ ಭೀಮಾ ನ ರೂಂ ತೋರಿಸ ಬಾ. ಎಲ್ಲರ ಮುಂದೆ ಸೂಳೆ ಮಗ ಎಂದಿದ್ದಾನೆ ಅವನಿಗೆ ಬಿಡಲ್ಲ ಎಂದರು. ನನ್ನನ್ನು ಬಲವಂತವಾಗಿ ಭೀಮ ನ ರೂಂ ಗೆ ಕರೆದುಕೊಂಡು ಹೋದರು. ಅಲ್ಲಿ ಲೇ ಭೀಮಾ ನೀನು ಲೇ ಸೂಳೆ ಮಗ CPL ಮೀಟಿಂಗ್‌ನಲ್ಲಿ ಎಲ್ಲರ ಮುಂದೆ ನನಗೆ ಸೂಳೆ ಮಗ ಅಂತ ಹೇಳಿದಿ ಎಲ್ಲರ ಮುಂದೆ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳು ಮಗನೆ ಅಂತ ಭೀಮಾ ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಗ ನಾನು ಮಧ್ಯೆ ಪ್ರವೇಶಿಸಿ ಇಬ್ಬರ ನಡುವೆ ಸಾಂತ್ವನ ಮಾಡಿದೆ. ನಂತರ ಭೀಮಾ ನ ಕಥೆ ಮುಗಿಯಿತು. ಈಗ ನೀನು ಲೆ ಸೂಳೆ ಮಗ ಗಣೇಶ ಎಂದರು. ನನ್ನ ಪರಿವಾರ ನನ್ನ ಹೆಂಡತಿ, ತಾಯಿ ಅಕ್ಕ ನ ಮೇಲೆ ಕೆಟ್ಟದಾಗಿ ಮಾತನಾಡಿದರು ಅವಾಚ್ಯ ಶಬ್ದಗಳಿಂದ ಬೈದರು. ಜಾತಿ ನಿಂದನೆ ಮಾಡಿದರು ನನ್ನ ಶರ್ಟ್ ಹರಿದು ನನ್ನ ಬಲಗೈ ಹೆಬ್ಬೆರಳನ್ನು ತಿರುಗಿಸಿ facture ಮಾಡಿ ಬೆಡ್ ಲೈಟ್ ತೆಗದು ಕೊಂಡು ನನ್ನ ಬೆನ್ನಿಗೆ ಹೊಡೆದು ಅಲ್ಲೆ ಮಾಡಿದರು. ಅವರು ನನ್ನ ಮೇಲೆ ಮೊದಲು ಕೈ ಎತ್ತಿದಕ್ಕೆ ನಾನು ಅವರ ಮೇಲೆ ಕೈ ಎತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಭೀಮಾ ನಾಯ್ಕ, ವಿಶ್ವ ಹಾಗೂ ಶರಣಪ್ಪ. ಈ ಎಲ್ಲಾ ವಿಷಯ ಎಲ್ಲಾ ಮುಖಂಡರಿಗು ತಿಳಿದಿದೆ. ಮುಖಂಡರು ಇಬ್ಬರ ತಪ್ಪಿದೆ. ಇಬ್ಬರೂ ಪಕ್ಷದ ಮುಜುಗರಕ್ಕೆ ಕಾರಣ ಆಗಿದ್ದರಿ ಎಂದು ಹೇಳಿ ಈಗಲ್ ಟನ್ ರೆಸಾರ್ಟ್ ನಲ್ಲಿ doctor’s ಗೆ ಕರಿಸಿ ನನಗೆ ಪ್ರಥಮ ಚಿಕಿತ್ಸೆ ಮಾಡಿದರು. ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರೆ ಆನಂದ ಸಿಂಗ್ ಗೆ ಹೊಡೆಯ ಬೇಕು ಎಂಬ ಉದ್ದೇಶ ನನ್ನಲ್ಲಿ ಇಲ್ಲ. ಹಾಗಾದರೆ ನಾನು ಅವರ ಹತ್ತಿರ ರೂಂ ನಲ್ಲಿ 2 ರಿಂದ 3 ತಾಸು ಇದ್ದಾಗ ಮಾಡ ಬಹುದಾಗಿತ್ತು. ಯಾವುದೇ ಉದ್ದೇಶ ನನ್ನಲ್ಲಿ ಇಲ್ಲ.
ರಾಜಕೀಯ ವಾಗಿ ಮುಗಿಸಲು ಆನಂದ್ ಸಿಂಗ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹಾಗೂ ನನ್ನ ಕುಟುಂಬ ದವರಿಗೆ ಆನಂದ್ ಸಿಂಗ್ ಹಾಗೂ ಸಂದೀಪ್ ಸಿಂಗ್ ರಿಂದ ಜೀವ ಬೆದರಿಕೆ ಇದೆ.
ಕಂಪ್ಲಿ ಕ್ಷೇತ್ರದ ಜನರಿಗೆ ನನ್ನ ಮನವಿ. ಕಂಪ್ಲಿ ಕ್ಷೇತ್ರದ ಜನ ಸುಳ್ಳು ಸುದ್ದಿಗಳನ್ನು ನಂಬ ಬಾರದು. ನಾನು ಕಂಪ್ಲಿ ಬಿಟ್ಟು ಯಾವ ಕ್ಷೇತ್ರ ಕ್ಕೂ ಹೋಗುವುದಿಲ್ಲ ಕಂಪ್ಲಿ ಕಲ್ಯಾಣವೇ ನನ್ನ ಗುರಿ..
ಇಂತಿ ನಿಮ್ಮ ವಿಶ್ವಾಸಿ..J.N ಗಣೇಶ…????#kampli #congress #kpcc #karnataka#media #justice
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ