Latest

ಈ ಜಾತ್ರೆಯಲ್ಲಿ ಜನಸ್ತೋಮ ನೋಡಿ…


ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಭಾವೈಕ್ಯೆತೆಗೆ ಹೆಸರುವಾಸಿಯಾದ ತಾಲೂಕಿನ ಸುಣಧೋಳಿ ಗ್ರಾಮದ ಪವಾಡ ಪುರುಷ ಜಡಿಸಿದ್ಧೇಶ್ವರ ಯೋಗೀಂದ್ರರ ಜಾತ್ರಾಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ರಥೋತ್ಸವವು ಶ್ರೀಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮಿಜಿಯವರ ಸಾನಿಧ್ಯದಲ್ಲಿ ಅಪಾ ಜನಸ್ತೋಮದ ಮಧ್ಯೆ ಸಡಗರ-ಸಂಭ್ರಮದಿಂದ ಜರುಗಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ಜಡಿಸಿದ್ದೇಶ್ವರ ಸನ್ನಿಧಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಹೂ ಮಾಲೆಗಳಿಂದ ಅಲಂಕರಿಸಲ್ಲಾಗಿತು, ಭಕ್ತರಿಂದ ದೀರ್ಘದಂಡ ನಮಸ್ಕಾರ ಸೇವೆ ಸಲ್ಲಿಸಿದರು. ಮಧ್ಯಾಹ್ನ ವಿವಿಧ ವಾದ್ಯಮೇಳ, ಕಳಸದೊಂದಿಗೆ ಗ್ರಾಮದಲ್ಲಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಜರುಗಿತು.


ಶ್ರೀ ಮಠಕ್ಕೆ ಆಗಮಿಸಿದ ಪಟಗುಂದಿ, ಭೈರನಟ್ಟಿ, ಹೊಸಟ್ಟಿ, ಗೋಸಬಾಳ ಸೇರಿದಂದತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳೊಂದಿಗೆ ದೇವಸ್ಥಾನದಿಂದ ಮೂರ್ತಿ ಹಾಗೂ ಕಳಶವನ್ನು ಸಕಲ ವಾಧ್ಯ ಮೇಳಗಳ ಮೇರವಣಿಗೆಯ ಮೂಲಕ ಬಾಳೆ ಗಿಡ, ಹೂ ಮಾಲೆ, ತಳಿಲು ತೋರಣಗಳಿಂದ ಶೃಂಗರಿಸಿದ ರಥದಲ್ಲಿ ಶ್ರೀ ಜಡಿಸಿದ್ಧೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆಸಲ್ಲಿಸಿದ ನಂತರ ಸೂರ್ಯಾಸ್ತದ ಸಮಯದಲ್ಲಿ ಭಕ್ತರ ಮುಗಿಲು ಮುಟ್ಟುವ ಭಕ್ತಿಯ ’ಹರಹರ ಮಹಾದೇವ’ ಘೋಷಣೆಯೊಂದಿಗೆ ಹಗ್ಗವಿಲ್ಲದೇ ರಥೋತ್ಸವ ಸಾಗಿತು.
ರತೋತ್ಸವದಲ್ಲಿ ವಾಲಗ, ಶಹನಾಯಿ, ತಮಟೆ, ಡೊಳ್ಳು, ಜಾಂಜ್ ಪಥ, ವಿವಿಧ ಭಾರತೀಯ ಸಂಸ್ಕೃತಿಯ ಸಂಗೀತದ ನಾದಗಳ ಜೊತೆ ಸುತ್ತುರ ದೇವರ ಪಲ್ಲಕ್ಕಿಗಳು, ನಂದಿಕೋಳು, ಮುತ್ತೈದೆಯರ ಆರತಿಮೇಳದೊಂದಿಗೆ ಭಕ್ತರ ಮುಗಿಲು ಮುಟ್ಟುವ ಭಕ್ತಿಯ ’ಹರಹರ ಮಹಾದೇವ’ ಘೋಷಣೆಯಲ್ಲಿ ಸಾಗುತ್ತಿರುವ ರಥದ ಮೇಲೆ ಭಕ್ತರು ಇಷ್ಟಾನುಸಾರ ತೆಂಗಿನಕಾಯಿ, ಬಾಳೆಹಣ್ಣು, ಖಾರೀಕು, ಬತ್ತಾಸು, ಹಾಗೂ ಹೂವನ್ನು ಸಮರ್ಪಿಸಿ ಕೃತಾರ್ತರಾದರು
ಮುಂಜಾನೆ ಭಕ್ತರು ಮಹಾಪ್ರಸಾ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು, ಜಾತ್ರೆಯಲ್ಲಿ ಜಾತಿ, ಮತ, ಧರ್ಮ ಎಂಬ ಬೇದ ಭಾವ ಮಾಡದೆ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಕೇರಳ, ಗೋವಾ ರಾಜ್ಯಗಳಿಂದ ಭಕ್ತರ ಸಮೂಹವೇ ಭಾಗವಹಿಸಿದ್ದರು.
ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಚಕ್ಕಡಿ ಬಂಡಿ, ಟ್ರ್ಯಾಕ್ಟರ, ಜೆಂಕಾರ ಕೂಗುತ್ತ ಆಗಮಿಸಿದ್ದು ಭಕ್ತರು ರಥೋತ್ಸವ ದರ್ಶನ ಪಡೆಯಲು ಮನೆ, ಮರಗಳ ಮೇಲೆ ಕುಳಿತಿದ್ದರು.
ಈ ಸಲದ ಜಾತ್ರೆಯ ಸಮಯದಲ್ಲಿ ಲೋಕಸಭಾ ಚುನಾವಣೆಯ ಕಾವು ಇದ್ದರೂ ಲಕ್ಷಾಂತರ ಭಕ್ತರು ಮುಂಜಾನೆ ಮತದಾನ ಮಾಡಿ ಸಂಜೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

(ಪ್ರಗತಿವಾಹಿನಿ ಸುದ್ದಿಗಳನ್ನು ಎ್ಲರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button