ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಮಂಗಳವಾರ ಮುಂಜಾನೆ ನಡೆದ ದಾಳಿಯ ವೇಳೆ ಉಗ್ರರ ಉಗ್ರಾಣವೇ ಉಡೀಸ್ ಆಗಿದೆ.
ಉಗ್ರರು ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಕಟ್ಟಡದ ಮೇಲೆ ದಾಳಿ ನಡೆದಿದ್ದು ಅಲ್ಲಿದ್ದ ಬಾಂಬ್, ಎಕೆ 47 ಪಿಸ್ತೂಲ್ ಸೇರಿದಂತೆ ಸಂಪೂರ್ಣ ನಾಶ ಮಾಡಲಾಗಿದೆ.
ಜೈಷ್ ಕಚೇರಿಯೂ ಧ್ವಂಸಗೊಂಡಿದ್ದು, ಸುಮಾರು 250 ಉಗ್ರರು ಮಟಾಷ್ ಆಗಿದ್ದಾರೆ. ಇವರಲ್ಲಿ ನಾಲ್ವರು ಮೋಸ್ಟ್ ವಾಂಟೆಡ್ ಉಗ್ರರೂ ಸೇರಿದ್ದಾರೆ ಎನ್ನಲಾಗಿದೆ.
ದಾಳಿಯ ತೀವ್ರತೆಗೆ ಕಂಗಾಲಾಗಿರುವ ಪಾಕಿಸ್ತಾನ ಮುಂದಿನ ಹೆಜ್ಜೆ ಕುರಿತಂತೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗದೆ ಕಂಗೆಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ