ಪ್ರಗತಿವಾಹಿನಿ ಸುದ್ದಿ, ಖಾನಾಪುರ
ರಜೆಗೆ ಆಗಮಿಸಿದ್ದ ಬೆಳಗಾವಿ ಜಿಲ್ಲೆಯ ಬಿಎಸ್ಎಫ್ ಯೋಧ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದ ಸುರೇಶ ರುದ್ರಪ್ಪ ತಳವಾರ(55) ಮೃತ ಯೋಧ.
ಇವರು ಜಾರ್ಖಂಡ ರಾಜ್ಯದಲ್ಲಿ ಬಿಎಸ್ ಎಫ್ ಜೆಸಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸುರೇಶ 40 ದಿನಗಳ ರಜೆಗೆ ಆಗಮಿಸಿದ್ದರು. ಬೆಳಗಾವಿಯ ಪೀರನವಾಡಿಯಲ್ಲಿ ಮನೆ ಮಾಡಿದ್ದ ಯೋಧ ಸುರೇಶ ಮಂಗಳವಾರ ಹಠಾತ್ತನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಸ್ವಗ್ರಾಮ ಬೇಕವಾಡದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ.