Latest

ಓಎಲ್ಎಕ್ಸ್ ನಲ್ಲಿ ಕಾರು ಮಾರುವುದಾಗಿ ಸುಲಿಗೆ ಮಾಡಿದ್ದ ನಾಲ್ವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಓಎಲ್‌ಎಕ್ಸ್ ನಲ್ಲಿ ಕಾರ್ ಕೊಡಿಸುವುದಾಗಿ ನಂಬಿಸಿ, ಸುಲಿಗೆ ಮಾಡಿದ ನಾಲ್ವರನ್ನು ಉದ್ಯಮಬಾಗ ಪೊಲೀಸರು ಬಂಧಿಸಿ, 1.80 ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಓಎಲ್‌ಎಕ್ಸ್ ಆಪ್ ಮೂಲಕ ಕಾರು ಮಾರುವುದಾಗಿ ತಿಳಿಸಿ ಖರೀದಿಸಲು ಇಚ್ಚಿಸಿದ ಚೋಳಾ ನಾಯಕನ ಹಳ್ಳಿಯ ಮಹ್ಮದಶಹಬಾಜ್‌ಅಹ್ಮದ ತಂದೆ ಕೆ ಮಹ್ಮದ ಇಕ್ಬಾಲಭಾಷಾ ಇವರಿಗೆ ಬೆಳಗಾವಿಗೆ ಬರಲು ತಿಳಿಸಿ, ಅವರನ್ನು ಮಾಣಿಕಬಾಗ ಟಾಟಾ ಶೋರೂಮ ಹತ್ತಿರದಿಂದ ಒಂದು ಇಂಡಿಕಾ ಕಾರಲ್ಲಿ ಕರೆದುಕೊಂಡು ಬಾಮನವಾಡಿ ಗ್ರಾಮದ ಒಂದು ಕಾಜು ತೋಟಕ್ಕೆ  ಹೋಗಿ ಅವರಿಗೆ ಚಾಕು ತೋರಿಸಿ, ಹೆದರಿಸಿ ಅವರ ಬಳಿ ಇದ್ದ ಒಟ್ಟು ರೂ. 2.82 ಲಕ್ಷ ರೂ. ನಗದು, ಎರಡು ಮೊಬೈಲ್ ಫೋನ್‌ಗಳು, ಒಂದು ವಾಚ್, ಒಂದು ಬೆಳ್ಳಿಯ ಉಂಗುರುಗಳನ್ನು ಸುಲಿಗೆ ಮಾಡಲಾಗಿತ್ತು.

 ಉದ್ಯಮಬಾಗ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಉದ್ಯಮಬಾಗ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮತ್ತು ಅಪರಾಧ ವಿಭಾಗ ಸಿಬ್ಬಂದಿ ತಂಡ ಕೃತ್ಯವೆಸಗಿದ ಧಾರವಾಡದ ಹೊಸತೇಗೂರಿನ ಬಸವರಾಜ @ಪುನೀತ ರಾಥೋಡ @ ಬಸ್ಸು ತಂದೆ ವಿರುಪಾಕ್ಷಪ್ಪ ಗೋಕಾವಿ, ಮಂಜುನಾಥ @ ಮಂಜ್ಯಾ@ ಮಂಜು ತಂದೆ ಸಿದ್ದಪ್ಪ ದೊಡ್ಡಮನಿ, ಬಸವರಾಜ @ಬಸ್ಯಾ@ ಬಸ್ಸು ತಂದೆ ಈರಪ್ಪ ಬೆಳವಡಿ, ಮಡಿವಾಳಪ್ಪ @ ಮಡಿವಾಳಿ ತಂದೆ ಪುಂಡಲೀಕ ಗರಗದ ಎನ್ನುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Home add -Advt

ಆರೋಪಿತರಿಂದ ಸುಲಿಗೆ ಮಾಡಿಕೊಂಡ ಹೋದ ಹಣದಲ್ಲಿ 1.32 ಲಕ್ಷ ರೂ ಹಣ, ಕೃತ್ಯ ಮಾಡಲು ಉಪಯೋಗಿಸಿದ 40 ಸಾವರ ರೂ ಕಿಮ್ಮತ್ತಿನ ಇಂಡಿಕಾ ಕಾರು, ಎರಡು ಪರ್ಸಗಳು, ಒಂದು ಬೆಳ್ಳಿಯ ಉಂಗುರ, ಒಂದು ಕೈಗಡಿಯಾರ ಹೀಗೆ ಒಟ್ಟು 1.80ರೂ ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುಲಿಗೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಉದ್ಯಮಬಾಗ ಠಾಣೆಯ ಪೊಲೀಸ್ ಇನ್ಸಪೆಕ್ಟರ ಎಸ್. ಸಿ. ಪಾಟೀಲ ಹಾಗೂ ಕೆ ಕೆ ಸವದತ್ತಿ,  ಜಗದೀಶ ಹಾದಿಮನಿ, ಅಜಿತ ಶಿಪ್ಪೂರೆ ಅವರ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಡಿ.ಸಿ ರಾಜಪ್ಪ ಶ್ಲಾಘಿಸಿದ್ದಾರೆ.

Related Articles

Back to top button