ಪ್ರಗತಿವಾಹಿನಿ ಸುದ್ದಿ, ಪುರಿ
ಓಡಿಶಾಕ್ಕೆ ಅಪ್ಪಳಿಸಿರುವ ಫೋನಿ ಚಂಡಮಾರುತಕ್ಕೆ 6 ಜನ ಬಲಿಯಾಗಿದ್ದು, ಸಾವಿರಾರು ಮನೆಗಳ ಮೇಲ್ಚಾವಣಿ ಹಾರಿಹೋಗಿದೆ.
ಹಲವಾರು ವಾಹನಗಳು ಉರುಳಿ ಬಿದ್ದಿದ್ದು ಅನಾಹುತ ಮುಂದುವರಿದಿದೆ. ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ದಶಕದಲ್ಲೇ ಅತ್ಯಂತ ಪ್ರಬಲ ಎನಿಸಿದ ಫೋನಿ ಚಂಡಮಾರುತ ಭಾರತ ಪ್ರವೇಶಿಸಿ, ಒಡಿಶಾವನ್ನು ಅಕ್ಷರಶಃ ವಿಲವಿಲ ಎನಿಸಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ದೇವಾಲಯಗಳ ನಗರಿ ಪುರಿಯಲ್ಲಿ ನೀರೋ ನೀರು. ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಲದ ಕರಾವಳಿ ಪ್ರದೇಶಗಳಲ್ಲೂ ಭಾರೀ ಮಾರುತಗಳು ಬೀಸುತ್ತಿವೆ.
ಆಂದ್ರಪ್ರದೇಶದದಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಚಾರ ರ್ಯಾಲಿಗಳನ್ನು ರದ್ದುಪಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ