ಟ್ವೀಟ್ ನಲ್ಲಿ ಸುರೇಶ ಅಂಗಡಿ ಹಾಕಿರುವ ರೈಲ್ವೆ ಮೇಲ್ಸೆತುವೆ ಬಿರುಕು ಬಿಟ್ಟಿರುವ ಚಿತ್ರಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ರೈಲ್ವೆ ಮೇಲ್ಸೆತುವೆ ಬಿರುಕು ಬಿಟ್ಟಿರುವ ವಿಷಯವನ್ನ ಗಂಭೀರವಾಗಿ ಪರಿಗಣಿಸಿರುವ ಸಂಸದ ಸುರೇಶ ಅಂಗಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರು ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ವಿವರ ವರದಿ ನೀಡುವಂತೆ ಬೆಳಗಾವಿಯ ಪ್ರೊಫೇಶನಲ್ ಫೋರಮ್ ಸದಸ್ಯರಿಗೆ ವಿನಂತಿಸುತ್ತೇನೆ. ಅವರ ವರದಿ ನೋಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಗತಿವಾಹಿನಿಯೋದಿಗೆ ಮಾತನಾಡದ ಅವರು, ನಾನು ಇನ್ನೂ ಬೆಳಗಾವಿಗೆ ಬಂದಿಲ್ಲ. ನವದೆಹಲಿಯಿಂದ ಹುಬ್ಬಳ್ಳಿಗೆ ಬಂದು ನೇರವಾಗಿ ಸಂಕ್ರಾಂತಿ ಆಚರಿಸಲು ನಮ್ಮ ಹಳ್ಳಿಗೆ ಹೋಗುತ್ತಿದ್ದೇನೆ. ರೈಲ್ವೆ ಮೇಲ್ಸೆತುವೆ ಬಿರುಕನ್ನು ತಜ್ಞರು ಪರಿಶೀಲಿಸಿ ವರದಿ ನೀಡಲಿದ್ದಾರೆ. ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ