Latest

ಕಿತ್ತೂರು ಸೈನಿಕ ಶಾಲೆಯಲ್ಲಿ ಸರಸ್ವತಿ ಭವನ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ಕಿತ್ತೂರು ರಾಣಿ ಬಾಲಕಿಯರ ವಸತಿ ಸೈನಿಕ ಶಾಲೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಸರಸ್ವತಿ ಭವನ (ಅಧ್ಯಯನ/ಪ್ರಾರ್ಥನಾ ಮಂದಿರ)ದ ಉದ್ಘಾಟನಾ ಸಮಾರಂಭ ಫೆ.೧೧ ರಂದು ನಡೆಯಿತು. ಅಮೆರಿಕಾ ಮಿಚಿಗನ್‌ನಲ್ಲಿರುವ ಸಗಿನಾ ವ್ಯಾಲಿ ವಿವಿಯ ಅಧ್ಯಕ್ಷ ಡಾ. ಡೋನಾಲ್ಡ್ ಜೆ. ಬಶಂದ ಹಾಗೂ ಅವರ ಪತ್ನಿ  ಲಿಯಾನಾ ಬಶಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸರಸ್ವತಿ ಭವನ (ಅಧ್ಯಯನ/ಪ್ರಾರ್ಥನಾ ಮಂದಿರ) ಉದ್ಘಾಟಿಸಿ ಮಾತನಾಡಿದ ಡಾ. ಡೋನಾಲ್ಡ್ ಜೆ. ಬಶಂದ, ಸರಸ್ವತಿ ಭವನ ನಿರ್ಮಾಣವು ಶಾಲೆಯ ಅಭಿವೃದ್ಧಿಯನ್ನು ನಿರೂಪಿಸುತ್ತದೆ. ಇತ್ತಿಚಿಗೆ ಅಮೇರಿಕಾದಲ್ಲಿ ಮಹಿಳಾ ಪ್ರಧಾನ ವಕೀಲ ಹಾಗೂ ಮಹಿಳಾ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಶಕ್ತರಾಗಿ ಕಾರ್ಯನಿರ್ವಹಿಸಬಲ್ಲರು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ದಾಕ್ಷಾಯಣಿ. ಜಂಗಮಶೆಟ್ಟಿ, ಉಪಾಧ್ಯಕ್ಷ ಮಹಾಂತಪ್ಪ ಪಟ್ಟಣಶೆಟ್ಟರ, ಚೇರಮನ್ ಡಾ. ಮಹೇಂದ್ರ ಕಂಠಿ, ಗೀತಾ ಕಂಠಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಕರ್ನಲ್ ಆರ್.ಎಸ್. ಖತ್ರಿ (ನಿವೃತ್ತ), ಮುಖ್ಯಾಧ್ಯಾಪಕಿ ಕಮಲಾ ನಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button