ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ರಿಸರ್ಚನ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಶಿವಾಲಯದ ೪೦ನೇ ವಾರ್ಷಿಕೋತ್ಸವ ಸಮಾರಂಭ ಯುಗಾದಿ ಹಬ್ಬದ ಸಂದರ್ಭದಲ್ಲಿ ಜರುಗಿತು. ವಾರ್ಷಿಕೋತ್ಸವ ಮತ್ತು ಯುಗಾದಿಯ ಅಂಗವಾಗಿ 3 ದಿನಗಳ ಕಾಲ ವಿವಿಧ ಕಾರ್‍ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಇಷ್ಟಲಿಂಗ ಪೂಜೆ, ಅದರಿಂದಾಗುವ ಪ್ರಯೋಜನ ಹಾಗೂ ಶಿವಲಿಂಗದ ಮಹಾತ್ಮೆ ಕುರಿತು ಶ್ರೀಕಾಂತ ಶಾನವಾಡ ಉಪನ್ಯಾಸ ನೀಡಿದರು. ಡಾ. ಅವಿನಾಶ ಕವಿ ಮಾತನಾಡಿದರು. ಸಾಹಿತಿಗಳಾದ ಜಿನದತ್ತ ದೇಸಾಯಿ, ಶಾಂತಾದೇವಿ ಹುಲೆಪ್ಪನವರಮಠ, ಶ್ರೀಕಾಂತ ಶಾನವಾಡ, ಕೆಎಲ್‌ಇ ವಿಶ್ವವಿದ್ಯಾಲಯದ ಪ್ರಶಸ್ತಿ ಪಡೆದ ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಸತ್ಕರಿಸಲಾಯಿತು. ಆರಂಭದಲ್ಲಿ ಕುಲಸಚಿವ ಡಾ. ವಿ.ಡಿ. ಪಾಟೀಲ ಸಮಾರಂಭ ಉದ್ಘಾಟಿಸಿದರು.
ಡಾ. ಎನ್.ಎಸ್. ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಆರ್.ಎಸ್. ಮುಧೋಳ, ಡಾ. ಎ.ಪಿ. ಹೊಗಾಡೆ, ಡಾ. ಅಂಜನಾ ಬಾಗೇವಾಡಿ, ಡಾ. ಶಿವಯೋಗಿ ಹೂಗಾರ, ರವಿ ಶಿವಾನಾಯ್ಕರ ಮುಂತಾದವರು ಉಪಸ್ಥಿತರಿದ್ದರು. ಡಾ. ಸದಾನಂದ ಪಾಟೀಲ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ