Latest

ಕೆಎಲ್ಇ ವಿವಿ ಆವರಣದಲ್ಲಿ 100 ಅಡಿ ಎತ್ತರದಲ್ಲಿ ಹಾರಾಡಿದ ಧ್ವಜ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ನಮ್ಮದಾಗಿದ್ದು, ಅತ್ಯಂತ ದೊಡ್ಡ ಪ್ರಜಾಭುತ್ವ ದೇಶ ನಮ್ಮದು. ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ನಾಗರೀಕರಿಗೆ ಸಮಾನತೆಯ ನ್ಯಾಯವನ್ನು ಕಲ್ಪಿಸಿಕೊಟ್ಟಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ಕೆಎಲ್ಇ ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ  ಹೇಳಿದರು.

ಜವಾಹರಲಾಲ ನೆಹರು ಮೆಡಿಕಲ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾದ 100 ಅಡಿ ಎತ್ತರದಲ್ಲಿ 20×30 ಅಡಿ ಅಳತೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಹುಸಂಸ್ಕೃತಿಯುಳ್ಳ ದೇಶದಲ್ಲಿ ಶಾಂತಿ ಸಹನೆ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತೀಯ ಸಂವಿಧಾನವನ್ನು ಗೌರವಿಸಬೇಕು ಎಂದು ಕರೆ ನೀಡಿದರು.

Home add -Advt

ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ. ವಿವೇಕ ಸಾವೋಜಿ ಅವರು ಮಾತನಾಡಿ, ರಾಷ್ಟ್ರೀಯ ದಿನಾಚರಣೆಗಳು ದೇಶದ ಬಲಿಷ್ಠತೆ, ಸಂಬಂಧ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುವ ದಿನಗಳು. ಅವುಗಳನ್ನು ನಾವು ಸದಾ ಸ್ಮರಿಸಬೇಕು. ನಾವು ಮಾಡುವ ಕಾರ‍್ಯಗಳು ದೇಶದ ಸಮಗ್ರತೆ ಮತ್ತು ಅಖಂಡ ಭಾರತವನ್ನು ಪ್ರದರ್ಶಿಸಬೇಕು ಎಂದರು.

ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ದೇಹದ ಎಲ್ಲ ಅಂಗಾಂಗಳ ಕಸಿ ವಿಧಾನವನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಕಿಡ್ನಿ ಕಸಿ ನಡೆಯುತ್ತಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳು ಕಾರ‍್ಯವನ್ನು ಮಾಡಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಅಕಾಡೆಮಿಕ್ ಕ್ಯಾಲೆಂಡರ್, ಕ್ಲೀನ್ ಮ್ಯಾಗಜಿನ್ ಗಳನ್ನು ಬಿಡುಗಡೆಗೊಳಿಸಿದರು. ಡಾ. ವಿ ಡಿ ಪಾಟೀಲ, ಡಾ. ಹೆಚ್ ಬಿ ರಾಜಶೇಖರ, ಡಾ. ಎನ್ ಎಸ್ ಮಹಾಂತಶೆಟ್ಟಿ ಡಾ. ಎಂ ವಿ ಜಾಲಿ, ಡಾ. ವಿ ಎ ಕೋಠಿವಾಲೆ, ಡಾ. ಆರ್ ಎಸ್ ಮುಧೋಳ, ಡಾ. ಹೊಗಾಡೆ, ಡಾ. ಪ್ರೀತಿ ದೊಡವಾಡ, ಡಾ ಸುಧಾರೆಡ್ಡಿ, ಡಾ ಸಂಜೀವಕುಮಾರ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button