Latest

ಕೆಎಲ್‌ಎಸ್ ಐಎಂಇಆರ್‌ನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕಾರ್ಯಾಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಕೆಎಲ್‌ಎಸ್ ಐಎಂಇಆರ್ ಸಂಶೋಧನಾ ಕೇಂದ್ರದಲ್ಲಿ ರಾಜ್ಯ ಸರಕಾರದ ವಿಶ್ವೇಶ್ವರಯ್ಯ ಉದ್ಯಮ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ವಿಶ್ವೇಶ್ವರಯ್ಯ ಉದ್ಯಮ ಅಭಿವೃದ್ಧಿ ಕೇಂದ್ರದ ಬೌದ್ಧಿಕ ಆಸ್ತಿ ಹಕ್ಕುಗಳ ಕಾರ್ಯಕ್ರಮದ ಸಂಯೋಜಕಿ ಪ್ರಭಾವತಿ ರಾವ್ ಬೌದ್ಧಿಕ ಆಸ್ತಿ ಹಕ್ಕುಗಳ ಹೆಚ್ಚುತ್ತಿರುವ ಮಹತ್ವ ಹಾಗೂ ಸದ್ಯದ ಬೆಳವಣಿಗೆಗಳ ಕುರಿತು ಹಾಗೂ ಶಿಕ್ಷಣ ರಂಗ, ಉದ್ಯಮ ಕ್ಷೇತ್ರದಲ್ಲಿ ಬೌದ್ಧಿಕ ಆಸ್ತಿ ರಕ್ಷಣೆ ಅಗತ್ಯತೆ ಕುರಿತು, ಕರ್ನಾಟಕ ಸರಕಾರದ ರಫ್ತು ಅಭಿವೃದ್ಧಿ ಕೇಂದ್ರ ರಫ್ತು ಹೆಚ್ಚಳಕ್ಕೆ ಪೂರಕವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಓರಿಜಿನ್ ಐಪಿ ಸೊಲ್ಯೂಷನ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಂದು ಶರ್ಮಾ ಕಾಪಿರೈಟ್, ಪೇಟೆಂಟ್ ಹಾಗೂ ಟ್ರೇಡ್‌ಮಾರ್ಕ್ ಮುಖಾಂತರ ಬೌದ್ಧಿಕ ಆಸ್ತಿ ರಕ್ಷಣೆಯ ಕುರಿತು ವಿವಿಧ ಪ್ರಕರಣಗಳ ಉದಾಹರಣೆ ಸಹಿತ ವಿವರಿಸಿದರು.
ಕೆಎಲ್‌ಎಸ್ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಡಾ. ಎಸ್.ಜಿ. ಚಿನಿವಾರ ಸಂಪನ್ಮೂಲ ವ್ಯಕ್ತಿಗಳನ್ನು ಸತ್ಕರಿಸಿದರು. ಸಂಶೋಧನಾ ಕೇಂದ್ರದ ಸಂಯೋಜಕಿ ಡಾ. ಪೂರ್ಣಿಮಾ ಚರಂತಿಮಠ ನಿರ್ವಹಿಸಿದರು. ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು, ಉದ್ಯಮಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button