Latest

 ಕೆಜಿಎಫ್ ಹಿಂದಿ ಭಾಷೆಯ ಒಟ್ಟು ಕಲೆಕ್ಷನ್ 19.05 ಕೋಟಿ

 

 

Related Articles

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕೆಜಿಎಫ್ ಹಿಂದಿ ಭಾಷೆಯ ಒಟ್ಟು ಕಲೆಕ್ಷನ್ 19.05 ಕೋಟಿಯಾಗಿದೆ.  ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದ್ದು, 6ನೇ ದಿನ 2.60 ಕೋಟಿ ಗಳಿಸಿದೆ. 

 

ಇನ್ನೂ ಐದು ಕೋಟಿ ಗಳಿಸಿದ್ರೆ, ಕಬಾಲಿ ಮತ್ತು ಎಂಥಿರನ್ ಚಿತ್ರಗಳ ದಾಖಲೆಯನ್ನ ಮುರಿಯುತ್ತದೆ. ಮೊದಲ ದಿನ ಕೆಜಿಎಫ್ ಹಿಂದಿ ವರ್ಷನ್ 2.10 ಕೋಟಿ, 2ನೇ ದಿನ 3 ಕೋಟಿ, 3ನೇ ದಿನ 4.10 ಕಲೆಕ್ಷನ್ ಮಾಡಿತ್ತು. 4ನೇ ದಿನ ಸೋಮವಾರ 2.90 ಕೋಟಿ ಬಾಚಿಕೊಂಡಿತ್ತು. 5ನೇ ದಿನ 4.35 ಕೋಟಿ, 6ನೇ ದಿನ 6 ಕೋಟಿ ಸೇರಿ ಒಟ್ಟು 19.05 ಕೋಟಿ ಗಳಿಕೆಯಾಗಿದೆ.

 

ಹಿಂದಿಯಲ್ಲಿ ಡಬ್ ಆಗಿರುವ ಬೇರೆ ಭಾಷೆಯ ಚಿತ್ರಗಳ ಕಲೆಕ್ಷನ್ ಪಟ್ಟಿಯಲ್ಲಿ ಕೆಜಿಎಫ್ ಸಿನಿಮಾ ಆರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 (511ಕೋಟಿ), 2ನೇ ಸ್ಥಾನದಲ್ಲಿ 2.0 (188 ಕೋಟಿ ನಾಟ್ ಔಟ್), 3ನೇ ಸ್ಥಾನದಲ್ಲಿ ಬಾಹುಬಲಿ 1 (112 ಕೋಟಿ) ಗಳಿಸಿ ಟಾಪ್ ಮೂರರಲ್ಲಿದೆ. ರಜನಿಕಾಂತ್ ಅಭಿನಯದ ಕಬಾಲಿ (24 ಕೋಟಿ) ಸಿನಿಮಾ 4ನೇ ಸ್ಥಾನದಲ್ಲಿದೆ. ರಜನಿಯ ಇನ್ನೊಂದು ಸಿನಿಮಾ ಎಂಥಿರನ್ (22 ಕೋಟಿ) ಗಳಿಸಿ 5ನೇ ಸ್ಥಾನದಲ್ಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button