ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ರೈಲ್ವೆ ನಿಲ್ದಾಣದ ನೂತನ ಕಟ್ಟಡ ಹಾಗೂ ಲೋಂಡಾ ರೈಲ್ವೆ ಸ್ಟೇಶನ್‌ನಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ದಾದರ-ಪುದುಚೇರಿ-ದಾದರ ರೈಲು ಖಾನಾಪುರದಲ್ಲಿ ನಿಲುಗಡೆಗೆ ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಚಾಲನೆ ನೀಡಿದರು.
ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗದ ಹೆಚ್ಚುವರಿ ಜನರಲ್ ಮ್ಯಾನೇಜರ್ ಬಿ.ಬಿ. ಸಿಂಗ್, ಖಾನಾಪುರ ತಾಪಂ ಅಧ್ಯಕ್ಷೆ ನಂದಾ ಕೊಡಚವಾಡಕರ, ಹುಬ್ಬಳ್ಳಿ ವಲಯದ ರೈಲ್ವೆ ಮ್ಯಾನೇಜರ್ ರಾಜೇಶ ಮೋಹನ, ಹೆಚ್ಚುವರಿ ವಲಯ ಮ್ಯಾನೇಜರ್ ಎಸ್.ಕೆ. ಝಾ ಮುಂತಾದವರು ಉಪಸ್ಥಿತರಿದ್ದರು.
ಈಡೇರಿದ ಬಹುದಿನಗಳ ಬೇಡಿಕೆ : ಖಾನಾಪುರದಲ್ಲಿ ವೇಗದೂತ ರೈಲುಗಳ ನಿಲುಗಡೆಗೆ ಈ ಭಾಗದ ಜನತೆ ಬಹು ದಿನಗಳಿಂದ ಒತ್ತಾಯಿಸುತ್ತಲೇ ಬಂದಿದ್ದರು. ಈಗ ಮೂರು ವಾರಕ್ಕೊಮ್ಮೆ ಚಲಿಸುವ ದಾದರ-ಪುದುಚೇರಿ-ದಾದರ ರೈಲನ್ನು ೬ ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಖಾನಾಪುರದಲ್ಲಿ ನಿಲುಗಡೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದರಿಂದ ಜನರ ಬೇಡಿಕೆ ಈಡೇರಿದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ