ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರೊಂದಿಗೆ ಡೀಲ್ ಮಾಡಲು ಯತ್ನಿಸಿದ್ದಾರೆನ್ನುವ ಆಡಿಯೋ ಒಂದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಿಲೀಸ್ ಮಾಡಿದರು.
ಗುರುವಾರ ಮಧ್ಯ ರಾತ್ರಿ ದೇವದುರ್ಗದ ಪ್ರವಾಸಿ ಮಂದಿರಕ್ಕೆ ಶರಣಗೌಡ ಅವರನ್ನು ಕರೆಸಿಕೊಂಡ ಯಡಿಯೂರಪ್ಪ, 25 ಕೋಟಿ ರೂ. ಮತ್ತು ಒಳ್ಳೆಯ ಮಂತ್ರಿಸ್ಥಾನ ಕೊಡುವುದಾಗಿ ಆಮಿಷ ಒಡ್ಡಿದರು ಎನ್ನುವ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದಲ್ಲದೆ, ಶರಣಗೌಡ ಕೂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ವಿವರ ನೀಡಿದರು.
ಆಡಿಯೋ ಧ್ವನಿ ಸ್ಪಷ್ಟತೆ ಇಲ್ಲದಿದ್ದರೂ, ಅದರಲ್ಲಿ ಸ್ಪೀಕರ್ ಗೆ 50 ಕೋಟಿ ರೂ. ಕೊಟ್ಟು ಡೀಲ್ ಮಾಡಿಕೊಂಡಿದ್ದಾಗಿ ಹೇಳಲಾಗಿದೆ, ಸುಪ್ರಿಂ ಕೋರ್ಟ್ ನ್ಯಾಯಾಧೀಶರನ್ನೆಲ್ಲ ಪ್ರಧಾನಿ ಮತ್ತು ಅಮಿತ್ ಶಹ ಮ್ಯಾನೇಜ್ ಮಾಡುತ್ತಾರೆ ಎಂದೂ ಹೇಳಿದ್ದಾರೆ ಎಂದು ಸಿಎಂ ಹೇಳಿದರು.
ಪ್ರಧಾನ ಮಂತ್ರಿಗಳು ತಕ್ಷಣ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಸ್ಪೀಕರ್ ಗೆ ಸಹ ಪತ್ರ ಬರೆಯುತ್ತೇನೆ ಎಂಂದೂ ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ