Latest

ಗೋಗಟೆ ವಾಣಿಜ್ಯ ಮಹಾವಿದ್ಯಾಲಯಕ್ಕೆ ಏಳು ರ್‍ಯಾಂಕ್

    
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೨೦೧೭-೧೮ನೇ ಸಾಲಿನಲ್ಲಿ ಜರುಗಿದ ಪರೀಕ್ಷೆಯಲ್ಲಿ ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಬಿ.ಕಾಂ. ವಿಭಾಗದಲ್ಲಿ ೫ ಹಾಗೂ ಬಿಸಿಎ ವಿಭಾಗದಲ್ಲಿ ೨ ರ್‍ಯಾಂಕ್ ಪಡೆದುಕೊಂಡಿದೆ.
ಬಿ.ಕಾಂ. ವಿಭಾಗದಲ್ಲಿ ವಿಶ್ವವಿದ್ಯಾಲಯದ ಹತ್ತು ರ್‍ಯಾಂಕ್‌ಗಳಲ್ಲಿ ಅರುಣಾ ಭಗವಂತರಾಯ ನಾಯ್ಕ (೯೫.೬೨) ಎರಡನೆ ಸ್ಥಾನ, ಐಶ್ವರ್ಯ ಅರಳಲೆಮಠ (೯೪.೧೬) ನಾಲ್ಕನೆ ಸ್ಥಾನ, ಪ್ರೀತಿ ಸುನಿಲ ಕಾಮ್ಟೆ (೯೪.೫) ಐದನೆ ಸ್ಥಾನ, ಅನಿತಾ ಮಜಲೀಕರ (೯೩.೯೭) ಆರನೆ ಸ್ಥಾನ, ಸ್ವಾತಿ ಸುಶಾಂತ ಶಿರೋಡಕರ (೯೨.೯೭) ಒಂಬತ್ತನೆ ಸ್ಥಾನ ಹಾಗೂ ಬಿ.ಸಿ.ಎ. ವಿಭಾಗದಲ್ಲಿ ವಿಶ್ವವಿದ್ಯಾಲಯದ ಮೂರು ರ್‍ಯಾಂಕ್‌ಗಳಲ್ಲಿ ಸುಮನ ನರೇಂದ್ರ (೯೫.೮೧) ಮೊದಲ ಸ್ಥಾನ, ರೋಮಾ ದತ್ತ್ತಾ ಲೋಹಾರ (೯೨.೧೪)  ಮೂರನೆ ಸ್ಥಾನ ಪಡೆದುಕೊಂಡಿದ್ದಾರೆ.

Related Articles

Back to top button