Latest

ಗೋವನಕೊಪ್ಪ ಗಾಂಧಿ ಅಧ್ಯಯನ ಕೇಂದ್ರದಿಂದ ಗಣರಾಜ್ಯೋತ್ಸವ

    ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ

ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  70ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಗ್ರಾಮಸ್ಥರು ಮತ್ತು SCH ಪ್ರತಿಷ್ಠಾನದ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಥಳೀಯ ಹಿರೇಮಠದ ಶ್ರೀ ಅಪ್ಪಯ್ಯ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವ ವಹಿಸಿದ್ದರು. ಅಧ್ಯಕ್ಷತೆಯನ್ನು ಬಸವರಾಜ ಅನಿಕಿವಿ  ವಹಿಸಿದ್ದರು. ಗೋವನಕೊಪ್ಪ  ಪದವಿ ಪೂರ್ವ ಕಾಲೇಜು ಪ್ರಾಚಾರ್ಯ  ಸಿ. ಎಸ್. ಬಿರಾದಾರ, ಪ್ರಾಧ್ಯಾಪಕ ಪಿ.ವಿ.ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು. 

SCH ಪ್ರತಿಷ್ಠಾನದ ಮಹಾತ್ಮಾ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಸಿ. ಎಸ್. ಬಿರಾದಾರ ಅವರನ್ನು ಸತ್ಕರಿಸಲಾಯಿತು. 
 ಚನ್ನಬಸಪ್ಪ ಹೊಂಗಲ,  ಶಿವರುದ್ರಪ್ಪ ಹಟ್ಟಿಹೋಳಿ, ನಿಂಗಪ್ಪ ಚಬ್ಬಿ, ಮಡಿವಾಳಪ್ಪ ಗಿಡಮೂದಿ, ಶ್ರೀಶೈಲ ಅನಿಕಿವಿ, ಈರಪ್ಪ ವಾರದ, ಕುಬೇರ ಹಣಬರ, ಡಾ. ಶಿವಾನಂದ ಹೊಂಗಲ ಉಪಸ್ಥಿತರಿದ್ದರು. ಚೇತನ್ ಅನಿಕಿವಿ ಸ್ವಾಗತಿಸಿದರು. ಮೈಲಾರ ಅನಿಕಿವಿ ವಂದಿಸಿದರು. ಶಿವಪ್ರಸಾದ ಮದನಭಾವಿ ಕಾರ್ಯಕ್ರಮ ನಿರೂಪಿಸಿದರು.

Home add -Advt

Related Articles

Back to top button