ಪ್ರಗತಿವಾಹಿನಿ ಸುದ್ದಿ, ನವದೆಹಲಿ
2019ರ ಲೋಕಸಭಾ ಚುನಾವಣೆಗೆ ಸಿದ್ದವಾಗುತ್ತಿರುವ ಮಹಾಘಟಬಂಧನದ ಮೊದಲ ಸರಕಾರ ಕರ್ನಾಟಕದಲ್ಲಿ ರಚನೆಯಾಗಿದೆ. ಅದರ ಮೊದಲ ಮುಖ್ಯಮಂತ್ರಿ ಪರಿಸ್ಥಿತಿ ಒಬ್ಬ ಕ್ಲರ್ಕ ರೀತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಿರುವ ಅವರು, ಘಟಬಂಧನ ಸಾಗುತ್ತಿರುವ ರೀತಿಯನ್ನು ವ್ಯಂಗ್ಯವಾಡಿದ ಅವರು ಒಂದೊಂದೇ ರಾಜ್ಯವಾಗಿ, ಒಂದೊಂದೇ ಪಕ್ಷವಾಗಿ ಘಟಬಂಧನದಿಂದ ಹೊರಗೆ ಬರುತ್ತಿದೆ. ಅದರ ಪರಿಸ್ಥಿತಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಘಟಬಂಧನದ ಮೊದಲ ಸರಕಾರ ಕರ್ನಾಟಕದಲ್ಲಿ ರಚನೆಯಾಗಿದೆ. ಆದರೆ ಅಲ್ಲಿನ ಮುಖ್ಯಮಂತ್ರಿ ಮುಖ್ಯಮಂತ್ರಿಯಾಗಿ ಉಳಿದಿಲ್ಲ. ಒಬ್ಬ ಕ್ಲರ್ಕ್ ರೀತಿಯಲ್ಲಿ ಅವರ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ರೈತರನ್ನು ಈವರೆಗೆ ಕೇವಲ ಮತ ಬ್ಯಾಂಕ್ ಆಗಿಯಷ್ಟೆ ನೋಡಲಾಗುತ್ತಿತ್ತು. ನಾವು ಅವರಲ್ಲಿ ಬಲ ತುಂಬುತ್ತಿದ್ದೇವೆ. ಮಹಿಳೆಯರನ್ನು ಮುನ್ನೆಲೆಗೆ ತಂದಿದ್ದೇವೆ. ಸಮಾಜದ ಪ್ರತಿಯೊಂದು ವರ್ಗವನ್ನೂ ನಾವು ಬಲಪಡಿಸುತ್ತಿದ್ದೇವೆ ಎಂದ ಮೋದಿ ತಮ್ಮ ಭಾಷಣದಿದ್ದಕ್ಕೂ ಕಾಂಗ್ರೆಸ್ ನೀತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
(ಭಾಷಣ ಮುಂದುವರಿದಿದೆ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ