ಪ್ರಗತಿವಾಹಿನಿ ಸುದ್ದಿ, ಚಿಂಚಲಿಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾಧ್ಯ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾದೇವಿ. ಭಾರತ ಹುಣ್ಣಿಮೆ ನಂತರ ಬರುವ ಹಸ್ತಾ ನಕ್ಷತ್ರದ ಶುಭಗಳಿಗೆಯಲ್ಲಿ ಜರಗುವ ಜಾತ್ರೆ ಇದಾಗಿದ್ದು ಉತ್ತರ ಕರ್ನಾಟಕದಲ್ಲಿಯೇ ದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿದೆ.
ಫೇ.19 ರಿಂದ ಫೇ. 26ರ ವರೆಗೆ ಜಾತ್ರೆ ಜರುಗಲಿದ್ದು ಜಾತ್ರೆಗೆ ಸುಮಾರು 3 ಲಕ್ಷಕ್ಕಿಂತ ಹೆಚ್ಚು ಭಕ್ತರು ನೆರೆಯ ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂದ್ರಪ್ರದೇಶದ, ದೆಹಲಿ ಹೀಗೆ ಇತರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಫೇ.23 ರಂದು ಮಹಾ ನೈವ್ಯದ್ಯ ಇದ್ದು ಈ ದೇವಿಗೆ ಮಹಾಕಾರತಿ, ಮಹಾಕಾಳಿ, ಮಾಯವ್ವಾ ಎಂಬೆಲ್ಲ ಹೆಸರಿನಿಂದ ಪೂಜಿಸಲ್ಪಡುವ ಮಾಯಕ್ಕಾ ದೇವಿಯ ಜಾತ್ರೆಗೆ ಚಿಂಚಲಿ ಗ್ರಾಮ ಸಜ್ಜಾಗಿದೆ.ಪೌರಾಣಿಕ ಹಿನ್ನೆಲೆ:ದೇವಿಯು ಮಹಾರಾಷ್ಟ್ರದ ಮಾನದೇಶ (ಕೊಂಕಣ) ದಿಂದ ಬಂದವಳು ಎಂದು ಹೇಳುತ್ತಾರೆ. ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ ಅಲ್ಲಿಯೇ ನೆಲೆಯೂರಿದ್ದಾಳೆಂದು ಐತಿಹಾಸಿಕ ಕಥೆಗಳು ಹೇಳುತ್ತವೆ. ಭಕ್ತರು ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುತ್ತಾರೆ .ಹಿರಿಯರ ಪ್ರಕಾರ ಚಿಂಚಲಿಯಲ್ಲಿ ಹಿರಿದೇವಿ ಮೂಲ ದೇವತೆ. ಇವಳೇ ಗ್ರಾಮ ದೇವತೆ. ಮಾಯಕ್ಕಾದೇವಿ ಹಿರಿದೇವಿಯ ಆಶ್ರಯ ಪಡೆದು ಚಿಂಚಲಿಯಲ್ಲಿ ನೆಲೆಸಿದಳು. ಅದಕ್ಕಾಗಿ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ಸಲ್ಲುತ್ತದೆ. ಈಗಲೂ ಮೊದಲು ಹಿರಿದೇವಿ ದರ್ಶನ ಮಾಡಿ ನೈವೇದ್ಯ ಸಲ್ಲಿಸಿ ನಂತರ ಮಾಯಕ್ಕಾದೇವಿಗೆ ನೈವೇದ್ಯ ಸಲ್ಲಿಸುತ್ತಾರೆ ಭಕ್ತರು.ದೇವಿಯ ಪವಾಡ:ಒಂದು ದಿನ ದೇವಿಯು ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋದಾಗ ಅಲ್ಲಿ ಒಬ್ಬ ಕುರಿಕಾಯುವನ ಹತ್ತಿರ ಹೋಗಿ ಕುಡಿಯಲು ಕುರಿಯ ಹಾಲು ಕೇಳಿದಳು. ಅದಕ್ಕೆ ಕುರಿಕಾಯುವವನು ಕೊಡುವುದಿಲ್ಲ ಎಂದು ನಿರಾಕರಿಸಿದನಂತೆ. ಆಗ ಮಾಯಕ್ಕಾ ದೇವಿ ತನ್ನ ಶಕ್ತಿಯಿಂದ ಹಳ್ಳವನೆಲ್ಲ ಹಾಲಾಗಿ ಹರಿಯುವಂತೆ ಮಾಡಿದಳಂತೆ. ಇಂದಿಗೂ ಆ ಹಳ್ಳಕ್ಕೆ ‘ಹಾಲು ಹಳ್ಳ’ ಎಂಬ ಹೆಸರಿನಿಂದ ಕರೆಯುತ್ತಾರೆ. ಅದರ ಪಕ್ಕದಲ್ಲಿ ಕುರಿ ಕಾಯುತ್ತಿದ್ದವರಲ್ಲಿ ಕುರಿಯ ಉಣ್ಣೆ ಕೇಳಿದಕ್ಕೆ ಅವರು ನಿರಾಕರಿಸಿದ್ದರಿಂದ ಕೋಪದಿಂದ ದೇವಿ ನೀಡಿದ ಶಾಪದಿಂದ ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ. ಇಂದಿಗೂ ಹಾಲು ಹಳ್ಳದ ದಡದಲ್ಲಿ ಗುಂಪು ಗುಂಪಾಗಿ ಬಿದ್ದ ಕಲ್ಲುಗಳನ್ನು ಉಣ್ಣೆ ಮುತ್ತಪ್ಪನ ಕಲ್ಲುಳಿ ಎಂಬ ಹೆಸರಿನಿಂದ ಕರೆಯುತ್ತಾರೆ.ದೇವಿಯ ಅಲಂಕಾರ:ತೆಲೆಯ ಮೇಲೆ ಕಿರೀಟ, ಅದರ ಮೇಲೆ ಐದು ಹೆಡೆಯ ಸರ್ಪ, ನಾಲ್ಕು ಕೈಗಳ ತುಂಬಾ ಹಸಿರು ಬಳೆಗಳು, ಮೈತುಂಬಾ ಬಂಗಾರದ ಒಡವೆಗಳು, ಬಲಗೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ತ್ರಿಶೂಲಹಾಗೂ ಎಡಗೈಯಲ್ಲಿ ಹಾವು ಕಂಡು ಬರುತ್ತದೆ. ದೇವಿಯನ್ನು ಶಕ್ತಿ ದೇವಿ ಹಾಗೂ ಪಾರ್ವತಿ ಅವತಾರ ಎನ್ನುತ್ತಾರೆ ಇಲ್ಲಿನ ಹಿರಿಯರು.ದೇವಸ್ಥಾನದ ಮುಖ ಪೂರ್ವಕ್ಕೆ ಇದ್ದು 50 ಅಡಿ ಎತ್ತರದ ಮಹಾದ್ವಾರ ಇದೆ. ದೇವಿಯ ಮುಖ್ಯ ವಾಹನ ಕುದುರೆ. ದೇವಿಯ ವಿಗ್ರಹಗಳು, ಪಲ್ಲಕ್ಕಿ, ಉತ್ಸವ ಮೂರ್ತಿ ಎಲ್ಲವೂ ಅಶ್ವಾರೂಢವಾಗಿರುವುದು ವಿಶೇಷ. ಭಕ್ತರು ಮಾಯಕ್ಕನ ಕುದುರೆ ಮುಖಕ್ಕೆ ಭಂಡಾರ ಲೇಪಿಸಿ ನಂತರ ಹಣೆಗೆ ಲೇಪಿಸುವುದು ರೂಢಿ.21 ಶತಮಾನದಲ್ಲೂ ಕೂಡಾ ಅಪಾರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಅಪಾರ ಭಕ್ತರು ಎತ್ತಿನ ಗಾಡಿಯ ಮೂಲಕ ಹಾಡುತ್ತಾ ಕುಣಿಯತ್ತಾ ದೇವಿಯ ದರ್ಶನ ಪಡೆಯಲು ಬರುತ್ತಾರೆ ಭಕ್ತರು. ಹಿರಿಯರು ರೂಢಿಸಿರುವ ವಾಡಿಕೆಯಂತೆ ತೆಲೆಮಾರುಗಳಿಂದ ಬಂದಿರುವಂತ ಆಚರಣೆ ಭಕ್ತಿಯನ್ನು ಬಿಡದೆ ಪ್ರತಿ ವರ್ಷ ಭಾರತ ಹುಣಿಮೆ ನಂತರ ಬರುವ ಹಸ್ತಾ ಶುಭ ಗಳಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ ಗಡಿಭಾಗದ ಭಕ್ತರು..Read Next
Politics
8 hours ago
*ಬಿ.ಪಿ.ಎಲ್ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ*
Politics
12 hours ago
*ಪೌರಕಾರ್ಮಿಕರಿಗೆ ಗುಡ್ ನ್ಯೂಸ್*
8 hours ago
*ಬಾಂಬೆ ಸಾರ್ವಜನಿಕ ನ್ಯಾಸ ತಿದ್ದುಪಡಿ ವಿಧೇಯಕ ಅಂಗೀಕಾರ*
8 hours ago
*ಇ-ಖಾತಾ ಲೋಕಾರ್ಪಣೆ, ಪೌರಕಾರ್ಮಿಕರಿಗೆ ನೇಮಕಾತಿ ಆದೇಶ, ಮನೆಗಳ ಹಕ್ಕುಪತ್ರಗಳ ವಿತರಣೆ*
8 hours ago
*ಕೃಷ್ಣಾ ಮೇಲ್ದಂಡೆ ಸೇರಿದಂತೆ ವಿವಿಧ ಯೋಜನೆಗಳ ಭೂ ಸಂತ್ರಸ್ತ ರೈತರ ಪರಿಸ್ಥಿತಿ, ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್*
8 hours ago
*88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿ: ಕ್ರಿಮಿನಲ್ ಕೇಸ್ ದಾಖಲು: ಬೇಲಿಯೇ ಎದ್ದು ಹೊಲ ಮೇಯ್ದ ಸ್ಥಿತಿ*
8 hours ago
*ಬಿ.ಪಿ.ಎಲ್ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ*
9 hours ago
*ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ*
11 hours ago
ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಂಭ್ರಮಕ್ಕೆ ಇಂದು ಚಾಲನೆ: ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯದ ಹಬ್ಬ
12 hours ago
*ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 3600 ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಅಧಿಸೂಚನೆ*
12 hours ago
*ಪೌರಕಾರ್ಮಿಕರಿಗೆ ಗುಡ್ ನ್ಯೂಸ್*
12 hours ago
*ರಾಸಾಯನಿಕ ವಿಶ್ಲೇಷಣಾ ವರದಿ ನಂತರವೇ ಬಿಯರ್ ಮಾರಾಟಕ್ಕೆ ಬಿಡುಗಡೆ: ಸಚಿವ ತಿಮ್ಮಾಪುರ*
Related Articles
Check Also
Close



