Latest

ಜಿಲ್ಲೆಯ ಎಲ್ಲರನ್ನೂ ಹಿಂದಿಕ್ಕಿ ಲಕ್ಷ್ಮಿ ಹೆಬ್ಬಾಳಕರ್ ನಾಗಾಲೋಟ!

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Related Articles

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಈಗ ಟ್ವೀಟರ್ ನಲ್ಲಿ 5 ಸಾವಿರಕ್ಕೂಹೆಚ್ಚು ಫೋಲೋವರ್ಸ್ ಹೊಂದುವ ಮೂಲಕ ಜಿಲ್ಲೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ನಾಗಾಲೋಟ ಮಾಡಿದ್ದಾರೆ. ಗುರುವಾರ ಅವರ ಫಾಲೋವರ್ಸ್ ಸಂಖ್ಯೆ 5027 ಕ್ಕೇರಿದೆ.

5000 ದಾಟಿದ ಸಂಭ್ರವನ್ನು ಅವರು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿಲೆಬ್ರೇಟಿಂಗ್ ಗ್ರ್ಯಾಂಡ್ 5000 ಟ್ವೀಟರ್ ಫಾಲೋವರ್ಸ್ ಎಂದು ಹಾಕಿಕೊಂಡಿದ್ದಾರೆ.

Home add -Advt

ಕೆಲವು ತಿಂಗಳ ಹಿಂದೆ ಜಾರಕಿಹೊಳಿ ಸಹೋದರರೊಂದಿಗೆ ಪಿಎಲ್ ಡಿ ಬ್ಯಾಂಕ್ ಗಲಾಟೆ ನಡೆದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಫಾಲೋವರ್ಸ್ ಸಂಖ್ಯೆ 3 ಸಾವಿರದ ಗಡಿ ದಾಟಿತ್ತು. ಆಗಲೇ ಅವರು ಟ್ವೀಟರ್ ಅಕೌಂಟ್ ನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು. ಇದೀಗ ನಿರಂತರವಾಗಿ ಅವರ ಫಾಲೋವರ್ಸ್ ಸಂಖ್ಯೆ ಏರುತ್ತಿದೆ.

ಸಚಿವ ಸತೀಶ್ ಜಾರಕಿಹೊಳಿಗೆ 3981 ಫಾಲೋವರ್ಸ್ ಇದ್ದಾರೆ. ಶಾಸಕಿ ಅಂಜಲಿ ನಿಂಬಾಳಕರ್ ಗೆ 2478,  ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರಿಗೆ 1982, ಸಂಸದ ಸುರೇಶ ಅಂಗಡಿಗೆ 603, ಶಾಸಕ ಪಿ.ರಾಜೀವ್ ಗೆ 567 ಫಾಲೋವರ್ಸ್ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಧ್ಯಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಸೋಷಿಯಲ್ ಮೀಡಿಯಾ ನಿರ್ವಹಣೆಗಾಗಿಯೇ ಓರ್ವ ವ್ಯಕ್ತಿಯನ್ನು ಅವರು ನೇಮಿಸಿಕೊಂಡಿದ್ದಾರೆ. 

 

Related Articles

Back to top button