Latest

ಜೆಡಿಎಎಸ್ ಗೆ ರಾಜ್ಯದಲ್ಲಿ ಒಂದೇ ಸ್ಥಾನ: ಟೈಮ್ಸ್ ನೌ ಸಮೀಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :

ಅಭ್ಯರ್ಥಿಗಳ ಘೋಷಣೆ ಪೂರ್ವ ಟೈಮ್ಸ್‌ ನೌ ಮತ್ತು ವಿಎಂಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಇದರ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 15, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ 13 ಸ್ಥಾನಗಳನ್ನು ಗೆಲ್ಲಲಿದೆ. 

13ರಲ್ಲಿ ಕಾಂಗ್ರೆಸ್ 12 ಹಾಗೂ ಜೆಡಿಎಸ್ ಕೇವಲ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದಿದೆ ಸಮೀಕ್ಷೆ. 

ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ಕಾಂಗ್ರೆಸ್‌ 20 ಮತ್ತು ಜೆಡಿಎಸ್‌ 8 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 44.30 ರಷ್ಟು ಮತ ಹಾಗೂ ಮೈತ್ರಿಕೂಟ ಶೇ 43.50ರಷ್ಟು ಮತಗಳನ್ನು ಪಡೆಯಲಿದೆ.  ಇತರರು 11.20 ರಷ್ಟು ಮತಗಳನ್ನು ಪಡೆಯಲಿದ್ದಾರೆ. 
2014ರ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನ ಗೆದ್ದಿತ್ತು. 

Home add -Advt

 

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಶೇರ್ ಮಾಡಿ)

 

Related Articles

Back to top button