Kannada NewsKarnataka NewsLatest

*ಪ್ರಿಯಕರನಿಗೆ ಕೈಕೊಟ್ಟು ಬೇರೊಬ್ಬನೊಂದಿಗೆ ಪ್ರೀತಿ-ಪ್ರೇಮ; ನೊಂದ ಯುವಕ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಲಿವ್ ಇನ್ ರಿಲೇಶನ್ ಶಿಫ್ ನಲ್ಲಿದ್ದ ಯುವತಿಗೆ ಬೇರೊಬ್ಬನ ಜೊತೆ ಸಂಬಂಧವಿರುವುದನ್ನು ಕಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆನೇಕಲ್ ನಲ್ಲಿ ನಡೆದಿದೆ.

ಅನ್ಬುರಾಸನ್ ಆತ್ಮಹತ್ಯೆಗೆ ಶರಣಾದ ಯುವಕ. ಐಟಿ ಉದ್ಯೋಗಿಯಾಗಿದ್ದ ವಿದ್ಯಾ ಅದಾಗಲೇ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಳು. ಕೆಲ ದಿನಗಳಲ್ಲೇ ಅನ್ಬರಾಸನ್ ಎಂಬ ಯುವಕನನ್ನು ಪ್ರೀತಿಸತೊಡಗಿದ್ದ ವಿದ್ಯಾ ಗಂಡ-ಹೆಂಡತಿ ಎಂದು ಹೇಳಿಕೊಂಡು ಚಿಕ್ಕನಾಗಮಂಗಲ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಅನ್ಬರಾಸನ್ ಫ್ಲಿಪ್ ಕಾರ್ಟ್ ನಲ್ಲಿ ಮ್ಯಾನೇಜರ್ ಆಗಿದ್ದ. ಅನ್ಬರಾಸನ್ ಜೊತೆ ಲಿವ್ ಇನ್ ರಿಲೇಷನ್ ನಲ್ಲಿರುವಾಗಲೇ ವಿದ್ಯಾ ಬೇರೊಂದು ಯುವಕ ಸಂತೋಷ್ ಎಂಬಾತನ ಜೊತೆ ಪ್ರೀತಿ-ಪ್ರೇಮ ಎಂದು ಆಟವಾಡಲು ಶುರು ಮಾಡಿದ್ದಾರೆ. ಸಂತೋಷ್ ಹಾಗೂ ವಿದ್ಯಾ ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡ ಅನ್ಬುರಾಸನ್ ವಿದ್ಯಾಳಿಗೆ ಪ್ರಶ್ನಿಸಿದ್ದಾನೆ.

ಅಲ್ಲದೇ ಬುದ್ಧಿವಾದವನ್ನೂ ಹೇಳಿದ್ದಾನೆ. ಆದರೂ ಕೆಳದ ವಿದ್ಯಾ ಆತನ ಹಿಂದೆ ಬಿದ್ದಿದ್ದಾಳೆ. ಇದರಿಂದ ಮನನೊಂದ ಅನ್ಬುರಾಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆನ್ಬುರಾಸನ್ ಆತ್ಮಹತ್ಯೆಗೆ ವಿದ್ಯಾ ಹಾಗೂ ಸಂತೋಷ್ ಕಾರಣ ಎಂದು ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿದ್ದಾರೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Home add -Advt


Related Articles

Back to top button