ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಗ್ಲೋಬಲ್ ಬಿಜಿನೆಸ್ ಸ್ಕೂಲ್ ನಲ್ಲಿ ಇತ್ತಿಚಿಗೆ ಜ್ಞಾನ ಸಂಗ್ರಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸುಪರ್‌ಪಾವರ್ ಭಾರತ: ಮುಂದಿರುವ ಅವಕಾಶಗಳು ಮತ್ತು ಯೋಜನೆ ಈ ವಿಷಯಾಧಾರಿತಗಳ ಮೇಲೆ ಸ್ಪರ್ಧೆ ನಡೆಯಿತು. ವಿವಿಧ ಬಿಬಿಎ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದರು.
ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಮಹಾವೀರ ಉಪಾಧ್ಯೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರೋ. ಅಫ್ತಾಬ, ಇಮ್ರಾನ ಖಾನ್, ಓಂಕಾರ ತಿಳವೆ ಮತ್ತು ಡಾ. ಸೋನಲ್ ರೇವಣಕರ್ ನಿರ್ಣಾಯಕರಾಗಿ ಆಗಮಿಸಿದ್ದರು. ಭರತೇಶ ಬಿಸಿಎ ಮಹಾವಿದ್ಯಾಲಯದ ಲಕ್ಷ್ಮೀ ಹಿರೇಮಠ ಮತ್ತು ಏಕತಾ ಚೌಗುಲೆ ಕೆ.ಎಲ್.ಇ. ಬಿಬಿಎ ಮಹಾವಿದ್ಯಾಲಯದ ನಮನ್ ಜೈನ್ ಅವರು ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಪಡೆದರು. ನಿರ್ದೇಶಕ ಡಾ. ಪ್ರಸಾದ ದಡ್ಡಿಕರ ಸ್ವಾಗತಿಸಿದರು. ಡಾ. ಪದ್ಮಪ್ರಿಯಾ ಕತಗಲ್ ಮತ್ತು ಪ್ರೋ.ರಂಜನಾ ಉಪಾಸಿ ಕಾರ್ಯಕ್ರಮ ಸಂಯೋಜಿಸಿದ್ದರು.