ಪ್ರಗತಿವಾಹಿನಿ ಸುದ್ದಿ, ಅಥಣಿ
ಇಲ್ಲಿಯ ಮೋಟಗಿಮಠದ ಆಶ್ರಯದಲ್ಲಿ 3 ದಿನಗಳ ಶರಣಿ ಸಂಸ್ಕೃತಿ ಮೇಳ ಮತ್ತು ರಾಜ್ಯ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಜ.19, 20 ಹಾಗೂ 21ರಂದು ನಡೆಯಲಿದೆ.
ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಈ ಮೇಳದ ಉದ್ಘಾಟನೆ 19ರ ಸಂಜೆ 6 ಗಂಟೆಗೆ ನಡೆಯಲಿದೆ. ಗಚ್ಚಿನ ಮಠದ ಶಿವಬಸವ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ತಿಮ್ಮಾಪುರದ ಮಹಾಂತ ಸ್ವಾಮಿಗಳ ಸಮ್ಮುಖದಲ್ಲಿ ನಡೆಯುವುದು. ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದು, ಶಾಸಕ ಮಹೇಶ ಕುಮಠಳ್ಳಿ ಅಧ್ಯಕ್ಷತೆ ವಹಿಸುವರು. 3 ದಿನಗಳ ಕಾರ್ಯಕ್ರಮದ ವಿವರ ಇಲ್ಲಿದೆ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ