Latest

ಡಾ.ಸೋನಾಲಿ ಸರ್ನೋಬತ್ ಗೆ ಇಂಡಿಯನ್ ಐಕಾನ್ ಬಿಸಿನೆಸ್ ಅವಾರ್ಡ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬೆಳಗಾವಿಯ ಖ್ಯಾತ ವೈದ್ಯೆ, ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರಿಗೆ ಇಂಡಿಯನ್ ಐಕಾನ್ ಬಿಸಿನೆಸ್ ಅವಾರ್ಡ್ ದೊರಕಿದೆ.
ಖಿನ್ನತೆಗೊಳಗಾದವರ ಮತ್ತು ದುರ್ಬಲ ವರ್ಗದವರ ಆಪ್ತ ಸಮಾಲೋಚನೆ ಮತ್ತು ಅವರಿಗೆ ನೀಡಿದ ನೆರವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಖ್ಯಾತ ಚಿತ್ರ ನಟಿ ತಾನಾಜ್ ಇರಾನಿ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟ್ರದ ಒಟ್ಟೂ 47 ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಉದ್ಯಮ, ಶಿಕ್ಷಣ, ಕೃಷಿ, ಮಾನಸಂಪನ್ಮೂಲ, ಮಹಿಳಾ ಕ್ಷೇತ್ರಗಳ ಸಾಧಕರು ಪ್ರಶಸ್ತಿ ಪಡೆದರು.  ಪ್ರಶಸ್ತಿ ವಿಜೇತರೆಲ್ಲ ತಮ್ಮ ತಮ್ಮ ಸಾಧನೆ ಮತ್ತು ಅನುಭವಗಳನ್ನು ಈ ಸಂದರ್ಭದಲ್ಲಿ ವಿವರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button