Latest

ಡಿ.ರೂಪಾ ಮತ್ತೆ ಎತ್ತಂಗಡಿ: 2 ವರ್ಷದಲ್ಲಿ 5 ಬಾರಿ ಟ್ರಾನ್ಸಫರ್!

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಶಿಸ್ತಿನ, ಖಡಕ್ ಅಧಿಕಾರಿ ಎಂದೇ ಹೆಸರು ಮಾಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನು ಮತ್ತೆ ಎತ್ತಂಗಡಿ ಮಾಡಲಾಗಿದೆ.

Home add -Advt

ಕಳೆದ 2 ವರ್ಷದಲ್ಲಿ 5ನೇ ಬಾರಿ ಅವರನ್ನು ಟ್ರಾನ್ಸಫರ್ ಮಾಡುವ ಮೂಲಕ ನಿರಂತರವಾಗಿ ಸರಕಾರ ಅವರ ನೆಮ್ಮದಿಗೆ ಭಂಗ ಮಾಡುತ್ತಿದೆ.

ಅಡಿಶನಲ್ ಕಮಾಂಡೆಟ್ ಜನರಲ್, ಹೋಮ್ ಗಾರ್ಡ್ಸ್ ಮತ್ತು ನಾಗರಿಕ ಭದ್ರತೆ ಇಲಾಖೆ ಹೆಚ್ಚುವರಿ ನೀರ್ದೇಶಕಿಯಾಗಿದ್ದ ಡಿ. ರೂಪಾ ಅವರನ್ನು ಇದೀಗ ಬೆಂಗಳೂರು ರೈಲ್ವೆ ಪೊಲೀಸ್ ವಿಭಾಗದ ಐಜಿಪಿಯಾಗಿ ವರ್ಗಾವಣೆ  ಮಾಡಲಾಗಿದೆ.

2017ರ ಜನವರಿಯಲ್ಲಿ ಸಕಾಲ ಯೋಜನೆಯ ನಿರ್ದೇಶಕಿಯಾಗಿ ನೇಮಿಸಲಾಗಿತ್ತು. ಅದೇ ವರ್ಷ ಜೂನ್ ತಿಂಗಳಲ್ಲಿ ಅವರನ್ನು ಕಾರಾಗೃಹ ಡಿಐಜಿಯಾಗಿ ವರ್ಗಾಯಿಸಲಾಯಿತು. ಮತ್ತೆ ಕೇವಲ ಒಂದೇ ತಿಗಳಲ್ಲಿ, ಅಂದರೆ 2017ರ ಜುಲೈನಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಯಿತು. ಮತ್ತೆ 6 ತಿಂಗಳಲ್ಲಿ ಅಂದರೆ 2018ರ ಜನೆವರಿಯಲ್ಲಿ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ಭದ್ರತೆ ಇಲಾಖೆ ಐಜಿಪಿಯಾಗಿ ವರ್ಗಾಯಿಸಲಾಯಿತು. ಇದಾಗಿ ಕೇವಲ ಒಂದೇ ವರ್ಷದಲ್ಲಿ ಮತ್ತೆ ಈಗ ವರ್ಗಾವಣೆ ಮಾಡಲಾಗಿದೆ.

ನಿರಂತರ ವರ್ಗಾವಣೆಯಿಂದಾಗಿ ರೂಪಾ ಅವರಿಗೆ ತೀವ್ರ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಬಂಧಿಖಾನೆ ಡಿಐಜಿಯಾಗಿದ್ದಾಗ ಅಲ್ಲಿನ ಅಕ್ರಮಗಳನ್ನು ಹೊರಗೆಡವಿದ್ದೇ ರೂಪಾ ಅವರಿಗೆ ಮುಳುವಾಯಿತು. ಅವರ ಪರವಾಗಿ ನಿಲ್ಲಬೇಕಿದ್ದ ಸರಕಾರ ಅವರಿಗೆ ಎಲ್ಲ ರೀತಿಯಿಂದಲೂ ಹಿಂಸೆ ನೀಡಲು ಆರಂಭಿಸಿತು.

ನಿಷ್ಠೆಯಿಂದ ಕೆಲಸ ಮಾಡಿದರೆ ಸರಕಾರ ಅವರಿಗೆ ಎಂತಹ ಗೌರವ, ಸ್ಥಾನ ಕೊಡುತ್ತದೆ ಎನ್ನುವುದಕ್ಕೆ  ರೂಪಾ ಅವರ ಸ್ಥಿತಿಯೇ ಉತ್ತಮ ಉದಾಹರಣೆಯಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

Related Articles

Back to top button