Latest

ದಿವ್ಯಾಂಗರಿಗಾಗಿ ಚುನಾವಣೆ ಆಯೋಗ ಕೈಗೊಂಡಿರುವ ವಿಶೇಷ ಕಾರ್ಯಕ್ರಮ, ಸೌವಲತ್ತುಗಳ ಕೈಪಿಡಿ ಬಿಡುಗಡೆ

    ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ  ದಿವ್ಯಾಂಗರು ಮತದಾನ ಮಾಡಲು ಹಾಗೂ ಮತದಾನದ ಬಗ್ಗೆ ತಿಳಿಯಲು  ಅನುಕೂಲವಾಗುವಂತೆ ಚುನಾವಣಾ ಆಯೋಗ ಕೈಗೊಂಡಿದ್ದ ವಿಶೇಷ ಕಾರ್ಯಕ್ರಮಗಳು ಹಾಗೂ  ಸೌವಲತ್ತುಗಳ ಕುರಿತ “ನಿಮಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಕ್ಷಮಗೊಳಿಸುವುದು” ಕೈಪಿಡಿಯನ್ನು ಶನಿವಾರ ಮುಖ್ಯ ಚುನಾವಣಾ ಆಯುಕ್ತರಾದ ಸುನಿಲ್ ಆರೋರ ಅವರು ಬಿಡುಗಡೆ ಮಾಡಿದರು.
ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಲೋಕಸಭಾ ಚುನಾವಣೆ-2019ರ ಕುರಿತ ಪೂರ್ವ ತಯಾರಿ ಕಾರ್ಯಗಾರದಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಿವ್ಯಾಂಗರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಮತ್ತು ಮತದಾನ ಮಾಡಲು ನೀಡಿದ್ದ ವಿಶೇಷ ಸೌವಲತ್ತುಗಳ ಕುರಿತು ಅವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
 ದಿವ್ಯಾಂಗರು ಮತದಾನದಲ್ಲಿ ತಪ್ಪದೆ  ಪಾಲ್ಗೊಳ್ಳಲು ಆಯೋಗ   ದಿವ್ಯಾಂಗರಿಗಾಗಿ ಸಮಿತಿಗಳನ್ನು ರಚಿಸಿತ್ತು, ಪ್ರತಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ಬೇಟಿ ನೀಡಿ ದಿವ್ಯಾಂಗರನ್ನು ಗುರುತಿಸಿ ಅವರ ಅವಶ್ಯಕತೆಗೆ ಅನುಗುಣವಾಗಿ ಸೌವಲತ್ತುಗಳನ್ನು ನೀಡಿ ಮತದಾನಕ್ಕೆ ಪ್ರೋತ್ಸಾಹಿಸಲಾಗಿತ್ತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ನಾಲ್ಕು ಲಕ್ಷ ದಿವ್ಯಾಂಗ ಮತದಾರರನ್ನು ಗುರುತಿಸಲಾಗಿದ್ದು, ಮತದಾನದಲ್ಲಿ ಅವರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಆಯೋಗ ಮೊದಲ ಬಾರಿಗೆ ದಿವ್ಯಾಂಗ ಓಲಂಪಿಯನ್ ಗಿರೀಶ್ ಗೌಡ ಮತ್ತು ಅಶ್ವಿನಿ ಅಂಗಡಿಯವರನ್ನು ಆಯೋಗದ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು.
 ಅವರಿಗಾಗಿ ವಿಶೇಷ Appನ್ನು ಸಹ ಆಯೋಗ ಸಿದ್ದಪಡಿಸಿತ್ತು, ಸಹಾಯಕ್ಕಾಗಿ  ಅವರು ಅದರಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿತ್ತು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಗ್ರಾಮಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು 15 ಸಾವಿರಕ್ಕೂ ಹೆಚ್ಚು ವೀಲ್ ಚೇರ್ ಗಳನ್ನು ದಿವ್ಯಾಂಗರಿಗಾಗಿ ಖರೀದಿಸಿವೆ.
ದೃಷ್ಟಿ ದೋಷವುಳ್ಳ ದಿವ್ಯಾಂಗರ ಸಹಾಯಕ್ಕಾಗಿ ವೋಟರ್ ಗೈಡಲೈನ್ ಪುಸ್ತಕವನ್ನು ಬ್ರೈಲ್  ಲಿಪಿಯಲ್ಲಿ ಬಿಡುಗಡೆ ಮಾಡಲಾಗಿತ್ತು. 
ರಾಜ್ಯ ವಿಧಾನಸಭೆಯ ಇತ್ತೀಚಿನ  ಉಪಚುನಾವಣೆಯಲ್ಲಿ ಮತದಾನದ ದಿನ ದಿವ್ಯಾಂಗರನ್ನು ಮನೆಯಿಂದ ಕರೆತಂದು ಮತದಾನ ಮಾಡಿಸಿ ನಂತರ‌ ಅವರ ಮನೆಗೆ ಬಿಡಲು ವಾಹನ ವ್ಯವಸ್ಥೆಯನ್ನು ಸಹ ಮಾಡಿಸಲಾಗಿತ್ತು. ಇನ್ನೂ ಅನೇಕ ಕಾರ್ಯಕ್ರಮಗಳನ್ನು ದಿವ್ಯಾಂಗರಿಗಾಗಿ ಆಯೋಗ ಹಮ್ಮಿಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button