Latest

ದೇವೇಗೌಡರ ಮನೆದೇವರ ಅರ್ಚಕರ ಮನೆ ಮೇಲೆ ಐಟಿ ದಾಳಿ

ಪ್ರಗತಿವಾಹಿನಿ ಸುದ್ದಿ, ಹಾಸನ:
ಆದಾಯ ತೆರಿಗೆ ಅಧಿಕಾರಿಗಳ ಕಣ್ಣು (ಐಟಿ ಐ) ಈಗ ದೇವಾಲಯದ ಅರ್ಟಕರ ಮೇಲೂ ಬಿದ್ದಿದೆ. 
ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರ ಮನೆದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಅರ್ಚಕ ಪ್ರಕಾಶ್​ ಭಟ್​ ಅವರ ಮನೆ ಹಾಗೂ ದೇವಾಲಯದಲ್ಲಿ ಶೋಧ ನಡೆಸಲಾಗುತ್ತಿದೆ. ಇಬ್ಬರು ಅಧಿಕಾರಿಗಳು ಪರಿಸೀಲನೆ ನಡೆಸಿದ್ದು, ಅಲ್ಲಿ ಏನೂ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. 

ಗೋಡಂಬಿ, ದ್ರಾಕ್ಷಿ ಸಿಕ್ಕಿರಬೇಕು

ಹರದನಹಳ್ಳಿ ದೇವಾಲಯದ ಅರ್ಚಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎಚ್​.ಡಿ. ರೇವಣ್ಣ ಅವರು ಮಾಡ್ಲಿ ಬಿಡಿ, ಅವರ ಕೆಲಸ ಅವರು ಮಾಡುತ್ತಿದ್ದಾರೆ. ಈಶ್ವರನ ಮೇಲಾದರೂ ಮಾಡಲಿ, ಅರ್ಚಕರ ಮೇಲಾದರೂ ಮಾಡಲಿ. ಅರ್ಚಕರ ಮನೆಯಲ್ಲಿ ಏನು ಸಿಗುತ್ತೆ. ಗೋಡಂಬಿ, ದ್ರಾಕ್ಷಿ ಸಿಕ್ಕಿರಬೇಕು ಅಷ್ಟೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇಬ್ಬರು ಅಧಿಕಾರಿಗಳು ಬಂದು ನಮ್ಮ ಮನೆ ಬೀರು, ಮಹಡಿ, ಅಡುಗೆ ಮನೆ ಎಲ್ಲೆಡೆ ಪರಿಶೀಲಿಸಿದರು. ದೇವಾಲಯದ ಒಳಗೂ ಶೋಧನೆ ಮಾಡಿದರು. ಗರ್ಭಗುಡಿ ಶೋಧನೆಗೆ ಮುಂದಾದಾಗ ನಾವು ಗರ್ಭಗುಡಿ ಪ್ರವೇಶಿಸದಂತೆ ತಡೆದೆವು. ದೇವಸ್ಥಾನ ಮತ್ತು ನಮ್ಮ ಮನೆಯಲ್ಲಿ ಅವರಿಗೆ ಏನೂ ಸಿಗಲಿಲ್ಲ ಎಂದು ಅರ್ಚಕರ ಪತ್ನಿ ನೀಲಮ್ಮ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button